ಅಲಯನ್ಸ್ ವಿಮಾನ ಆರಂಭ ಶುರು

airport
Published on

ಕಲಬುರಗಿ: ಲಾಕ್ಡೌನ್ನಿಂದಾಗಿ ಸ್ಥಗಿತಗೊಳಿಸಿದ್ದ ಏರ್ ಇಂಡಿಯಾ ಅಂಗ ಸಂಸ್ಥೆಯಾಗಿರುವ ಅಲಯನ್ಸ್ ಏರ್ ಸಂಸ್ಥೆಯ ವಿಮಾನವು ಬೆಂಗಳೂರು-ಕಲಬುರಗಿ ನಡುವಿನ ವಿಮಾನ ಹಾರಾಟವು ಮೇ 28 ರಿಂದ ಶುರುವಾಗಲಿದೆ.
28, 31 ರಂದು ಮೊದಲಿನಂತೆ ಅಲಯನ್ಸ್ ವಿಮಾನವು ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 11-45ಕ್ಕೆ ಅಗಮಿಸಲಿದೆ. ನಂತರ 12-25ಕ್ಕೆ ಇಲ್ಲಿಂದ ಬೆಂಗಳೂರಿಗೆ ಪಯಣ ಬೆಳೆಸಲಿದೆ.
ಜೂನ್ 1ರಿಂದ ಈ ವಿಮಾನವು ಪ್ರತಿದಿನ ಕಲಬುರಗಿ-ಬೆಂಗಳೂರು ನಡುವೆ ಹಾರಾಟ ನಡೆಸಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣ ನಿದರ್ೇಶಕ ಜ್ಞಾನೇಶ್ವರರಾವ ತಿಳಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಿಂದ ಹೊರಟು ಕಲಬುರಗಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 8-45ಕ್ಕೆ ಲ್ಯಾಂಡಿಂಗ್ ಆಗಲಿದೆ. ನಂತರ 9-25ಕ್ಕೆ ಮರಳಿ ಬೆಂಗಳೂರಿಗೆ ಹಾರಲಿದೆ. ಬುಧವಾರದಿಂದ ಭಾನುವಾರವರೆಗೆ ಕಲಬುರಗಿಗೆ 11-45 ಗಂಟೆಗೆ ಲ್ಯಾಂಡಿಂಗ್ ಆಗಿ, ಮರಳಿ 12-25ಕ್ಕೆ ಬೆಂಗಳೂರಿಗೆ ತೆರಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net