ಅರ್ಹರಿಗೆ ಯೋಜನೆಗಳನ್ನು ಗ್ಯಾರಂಟಿಯಾಗಿ ತಲುಪಿಸಿ

CTD 13 MUDDPURA RAGUMURTY--010
Published on

ಚಿತ್ರದುರ್ಗ: ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಖಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕೆಂದು ಚಳ್ಳಕೆರೆ ಶಾಸಕ ಟಿ.ರ ಘುಮೂರ್ತಿ ಹೇಳಿದರು.
ಚಿತ್ರದುರ್ಗ ತಾಲೂಕು ಮುದ್ದಾಪುರದಲ್ಲಿ ಬುಧವಾರ ಏರ್ಪಡಿಸಿದ್ದ ಜನಸ್ಪಂದನ ಕಾರ‌್ಯಕ್ರಮಗಳಲ್ಲಿ ಮಾತನಾಡಿದ ಅವರು,ಐದು ಗ್ಯಾ ರಂಟಿ ಯೋಜನೆಗಳ ಪೈಕಿ ರಾಜ್ಯಸರ್ಕಾರ ನಾಲ್ಕನ್ನು ಜಾರಿಗೊಳಿಸಿದೆ. ಈ ಕುರಿತಂತೆ ಜನ ಸಾಮಾನ್ಯರಲ್ಲಿ ಇನ್ನೂ ಹೆಚ್ವಿನ ಅರಿವು ಮೂಡಿಸ ಬೇಕು.
ಯಾವುದೇ ಅರ್ಹ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗ ಬಾರದು,ಈ ನಿಟ್ಟಿನಲ್ಲಿ ಅಗತ್ಯ ಎಚ್ಚರಿಕೆ ವಹಿಸುವಂತೆ ಅಧಿ ಕಾರಿಗಳಿಗೆ ತಾಕೀತು ಮಾಡಿದರು. ತಾಂತ್ರಿಕ ದೋಷವಿರುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ಅಧಿಕಾರಿಗಳು ಪರಿಶೀಲಿಸಿ ಪರಿ ಹಾರ ಕಲ್ಪಿಸಬೇಕು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಹೊಸ ವಸತಿ ಪ್ರದೇಶಗಳನ್ನು ಗ್ರಾಮಠಾಣ ವ್ಯಾಪ್ತಿಗೆ ತರುವಂತೆ ತಾ.ಪಂ.ಇಒ ಹನುಮಂತಪ್ಪ ಹಾಗೂ ಮತ್ತು ತಹಸೀಲ್ದಾರ್ ಡಾ.ನಾಗವೇಣಿ ಅವರಿಗೆ ಸೂಚಿಸಿದರು. ಜನರಿಗೆ ಶುದ್ಧ ಕುಡಿವ ನೀರು ಪೂರೈಸಬೇಕು. ಗ್ರಾಮಾಡಳಿತಾಧಿಕಾರಿಗಳು ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿ ಹಳ್ಳಿಗೆ ತೆರಳಿ ಕೆಲಸ ಮಾಡಬೇಕು.
ಇ-ಸ್ವತ್ತು ವಿತರಣೆಗೆ ಸಂಬಂಧಿಸಿದಂತೆ ದೂರುಗಳಿದ್ದು,ಕಾಲಮಿತಿಯೊಳಗೆ ಇ-ಸ್ವತ್ತು ವಿತರಿಸುವಂತೆ ಪಿಡಿಒಗಳಿಗೆ ಸೂಚಿಸಿದರು. ಇ ದೇ ವೇಳೆ ಶಾಸಕರು,ಪಿಂಚಣಿ,ಸ್ಮಶಾನಗಳಿಗೆ ನಿವೇಶನ ಮತ್ತಿತರ ಸಮಸ್ಯೆಗಳೆಡೆ ಚರ್ಚಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಸಿ ಡಿಪಿಒ ಸುಧಾ,ಮುದ್ದಾಪುರ ಗ್ರಾಪಂ ಅಧ್ಯಕ್ಷೆ ಮಂಗಳಾ ಸಿದ್ದೇಶ್,ಉಪಾಧ್ಯಕ್ಷೆ ಸುಧಾರಾಣಿ ನಾಗರಾಜ್,ಸದಸ್ಯರು,ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net