ಅರ್ಹರಿಗೆ ದಕ್ಕಲಿ ಸೌಲಭ್ಯ, ಶಾಸಕ ನಿಸರ್ಗ ನಾರಾಯಣಸ್ವಾಮಿ ಆಶಯ, ದೇವನಹಳ್ಳಿಯಲ್ಲಿ 1.84 ಕೋಟಿ ರೂ. ಕಾಮಗಾರಿಗೆ ಚಾಲನೆ

F.04 dhl TMC Kaamagari chaalane news- ph-1
Published on

ದೇವನಹಳ್ಳಿ: ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರದಿಂದ 1.84 ಕೋಟಿ ರೂ. ಮಂಜೂರಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಸಬೇಕು. ಹಾಗೆಯೇ ಸರ್ಕಾರದ ಸೌಲಭ್ಯ ಅರ್ಹರಿಗೆ ದೊರಕುವಂತಾಗಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ 6 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರದ 15ನೇ ಹಣಕಾಸಿನಲ್ಲಿ 2021-22ನೇ ಸಾಲಿಗೆ ಪುರಸಭೆಗೆ ನೀರು ಸರಬರಾಜು ಕಾಮಗಾರಿಗಳಿಗೆ 63.60 ಲಕ್ಷ, ರಸ್ತೆ ಮತ್ತು ಚರಂಡಿ ಅಭಿವೃದ್ಧಿಗಾಗಿ 69.80 ಲಕ್ಷ, ಬೀದಿದೀಪ ಕಾಮಗಾರಿಗೆ 15 ಲಕ್ಷ ಹಾಗೂ ಎಸ್‌ಎ್ಸಿ ಮತ್ತು ಪುರಸಭೆ ನಿಧಿ ಎಸ್‌ಸಿಪಿ, ಟಿಎಸ್‌ಪಿ ಅನುದಾನದಡಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 28.43 ಲಕ್ಷ, ಪುರಸಭೆ ನಿಧಿ ಶೇ.5ರ ಅನುದಾನದಡಿ ಅಂಗವಿಕಲರಿಗೆ ತ್ರಿಚಕ್ರ ವಾಹನಕ್ಕೆ 4.78 ಲಕ್ಷ, ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆಗಾಗಿ ಪುರಸಭೆ ನಿಧಿಯ ಶೇ.24.10ರ ಅನುದಾನದ 2 ಲಕ್ಷ ಸೇರಿ ಒಟ್ಟು 1 84 ಕೋಟಿ ರೂ. ಮಂಜೂರಾಗಿದೆ ಎಂದರು.

ಈಗಾಗಲೇ ಬಯಾಪದಿಂದ 24 ಕೋಟಿ ರೂ. ವೆಚ್ಚದ ಡಿಪಿಆರ್ ಅನುಮೊದನೆಗೊಂಡಿದೆ. ಲೋಕೊಪಯೋಗಿ ಇಲಾಖೆಯಿಂದ 5.5 ಕೋಟಿ ರೂ. ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಸಿ.ಜಗನ್ನಾಥ್, ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಸದಸ್ಯರಾದ ಕೋಮಲಾ ನಟರಾಜ್, ಗೀತಾ ಶ್ರೀಧರಮೂರ್ತಿ, ಲೀಲಾವತಿ, ಸೋಮಶೇಖರ ಬಾಬು, ವೇಣುಗೋಪಾಲ್, ಬಾಂಬೆ ನಾರಾಯಣಸ್ವಾಮಿ, ಡಿ.ಆರ್.ಬಾಲರಾಜ್, ಮಂಜುನಾಥ್, ಸುಮಿತ್ರಾ ಮಂಜುನಾಥ್, ಗೋಪಮ್ಮ, ವೈ. ಆರ್.ರುದ್ರೇಶ್, ಎನ್.ರಘು, ಮಂಜುಳಾ ಮೂರ್ತಿ, ಜಿ.ಸುರೇಶ್, ಜಿ.ಎ.ರವೀಂದ್ರ, ಚೈತ್ರಾ ವಿಜಯಕುಮಾರ್, ಮುನಿಕೃಷ್ಣ, ಲಕ್ಷ್ಮೀ ಅಂಬರೀಶ್, ರತ್ನಮ್ಮ, ಎಸ್.ನಾಗೇಶ್, ನಾಮಿನಿ ಸದಸ್ಯರಾದ ಆರ್.ಪುನೀತಾ, ಮಂಜುಳಾ ಗುರುಸ್ವಾಮಿ, ಗೋಪಾಲಕೃಷ್ಣ, ಮಧುಸೂದನ್, ನಾಗೇಶ್, ಸಮುದಾಯ ಅಭಿವೃದ್ಧಿ ಅಧಿಕಾರಿ ಬೈರಪ್ಪ, ಮುನಿನಂಜಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮುನೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net