ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸಿ

CTD--88
Published on

ಚಿತ್ರದುರ್ಗ: ಅರ್ಹ ಫಲಾನುಭವಿಗಳು ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗದಂತೆ ನೋಡಿಕೊಳ್ಳ ಬೇಕೆಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅಧಿಕಾ ರಿಗಳಿಗೆ ಸೂಚಿಸಿದರು.

ಚಿತ್ರದುರ್ಗ ತಾಲೂಕಿನ ತುರುವನೂರಲ್ಲಿ ಸೋಮವಾರ ಏರ್ಪಡಿಸಿದ್ದ ಪಿಂಚಣಿ ಅದಾಲತ್ ಕಾರ‌್ಯಕ್ರಮದಲ್ಲಿ ಫಲಾನುಭವಿಗಳಿಗೆ ಪಿಂಚಣಿ ಪ್ರ ಮಾಣ ಪತ್ರವಿತರಿಸಿ ಮಾತನಾಡಿ,ಕಂದಾಯ ಇಲಾಖೆ ತಾಲೂಕು, ಹೋಬಳಿ ಮಟ್ಟದಲ್ಲಿ ಏರ್ಪಡಿಸುವ ಪಿಂಚಣಿ ಅದಾಲತ್(ಸಾಮಾಜಿಕ ಭ ದ್ರತಾ ಯೋಜನೆಗಳ ಮಂಜೂರಾತಿ)ಸೌಲಭ್ಯಗಳ ಸದುಪಯೋಗ ಅರ್ಹರಿಗೆ ಸಿಗಬೇಕು,ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು.

ತುರುವನೂರು ಹೋಬಳಿ ವ್ಯಾಪ್ತಿಯ 50 ಫಲಾನುಭವಿಗಳಿಗೆ ಪಿಂಚಣಿ ಪ್ರಮಾಣ ಪತ್ರ ವಿತರಿಸಿದ್ದೇವೆ. ಈ ಹೋಬಳಿಯಲ್ಲಿ ಈಗಾಗಲೇ 88 34 ಜನ ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದು,ಮುಂದಿನ ದಿನಗಳಲ್ಲಿ ಅರ್ಹ ಎಲ್ಲ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಒದಗಿಸಲು ಅಧಿಕಾರಿಗಳು ಪ್ರತಿ ಹಳ್ಳಿಯಲ್ಲಿ ಪರಿಶೀಲಿಸಬೇಕೆಂದು ತಾಕೀತು ಮಾಡಿದರು.

ತುರುವನೂರು ಗ್ರಾಮ ಮತ್ತು ಹೋಬಳಿ ವ್ಯಾಪ್ತಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ತುರುವ ನೂ ರಲ್ಲಿ ಪದವಿ ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ರಸ್ತೆ ಕಾಮಗಾರಿಗಳನ್ನು ಹಂತ,ಹಂತವಾಗಿ ಪೂರ್ಣಗೊಳ್ಳಲಿವೆ. ಗೃಹಲಕ್ಷ್ಮೀ ಗೃಹ ಜ್ಯೋತಿ,ಅನ್ನ ಭಾಗ್ಯ ಇತ್ಯಾದಿ ಯೋಜನೆಗಳಿಂದ ಹೊರಗುಳಿದ ಕುಟುಂಬಗಳಿಗೆ ಸೌಲಭ್ಯ ಕೊಡಿಸುವ ಹೊಣೆ ತಮ್ಮಗಳ ಮೇಲಿದೆ ಎಂದು ಅಧಿ ಕಾರಿಗಳನ್ನು ಎಚ್ಚರಿಸಿದರು.

ಎಸಿ ಎಂ.ಕಾರ್ತಿಕ್,ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ,ಜಿಪಂ ಮಾಜಿ ಸದಸ್ಯಬಾಬುರೆಡ್ಡಿ, ತಾಪಂ ಇಒ ರವಿಕುಮಾರ್,ಗ್ರಾಪಂ ಅಧ್ಯಕ್ಷೆ ನಾಗರತ್ನ,ಉಪಾಧ್ಯಕ್ಷ ತಿಪ್ಪೇಸ್ವಾಮಿ,ಸದಸ್ಯರಾದ ಡಿ.ಆರ್.ಮಂಜುನಾಥ್,ನಾಗವೇಣಿ,ಪಿಡಿಒ ಖಲೀಂ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net