ಅರ್ಹ ಫಲಾನುಭವಿಗಳ ಮನೆಗಳನ್ನು ಜಿಪಿಎಸ್ ಮಾಡಿ

GPS the homes of eligible beneficiaries
ನಾಲತವಾಡ ಪುರಸಭೆಯ ಆಶ್ರಯ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಲ್ಲಿ ಅರ್ಹರನ್ನು ಮಾತ್ರ ಪರಿಗಣಿಸಿ ಜಿಪಿಎಸ್ ಮಾಡಿಸಬೇಕು ಎಂದು ಒತ್ತಾಯಿಸಿ ಪಪಂ ಸದಸ್ಯರು ಮುಖ್ಯಾಧಿಕಾರಿ ಅನಿಲಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ಪೃಥ್ವಿರಾಜ ನಾಡಗೌಡ, ಮುತ್ತು ಗೊರಬಾಳ, ಡಾ. ಎಸ್.ಬಿ. ಗಂಗನಗೌಡ್ರ, ಬಸ್ಸು ಗಂಗನಗೌಡ್ರ, ಅಲ್ಲಾಭಕ್ಷ ಮೂಲಿಮನಿ ಇತರರಿದ್ದರು.
Published on

ನಾಲತವಾಡ: ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ವಾಜಪೇಯಿ ವಸತಿ ಯೋಜನೆಗಳಲ್ಲಿ 2018-19ನೇ ಸಾಲಿನಲ್ಲಿ ಆಯ್ಕೆಯಾದ ಸುಮಾರು 736 ಆಶ್ರಯ ಮನೆಗಳಿಗೆ ಸಂಬಂಧಿಸಿದ ಅರ್ಹ ಫಲಾನುಭವಿಗಳನ್ನು ಮಾತ್ರ ಜಿಪಿಎಸ್ ಮಾಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಪಪಂ ಕಾಂಗ್ರೆಸ್‌ನ ಸದಸ್ಯರು ಮುಖ್ಯಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.

ಈಗಾಗಲೇ ಈ ಹಿಂದೆ ಬಿಜೆಪಿಯ ಹಲವು ಮುಖಂಡರು ವಸತಿ ನಿಗಮದ ನಿಯಮಗಳನ್ನು ಪಾಲಿಸದೇ ಮನಬಂದಂತೆ ಅನರ್ಹರಿಗೆ ಮನೆಗಳನ್ನು ಆಯ್ಕೆ ಮಾಡಿದ್ದಾರೆ. ಆಯ್ಕೆಯಲ್ಲಿ ಸರ್ಕಾರಿ ನೌಕರರು, ಶ್ರೀಮಂತರು ಹಾಗೂ ಒಂದೇ ಕುಟುಂಬದಲ್ಲಿ ಸುಮಾರು 3ರಿಂದ 4 ಮನೆಗಳನ್ನು ಪಡೆದುಕೊಂಡಿದ್ದಾರೆ. ಇವುಗಳನ್ನು ತಕ್ಷಣ ರದ್ದುಗೊಳಿಸಬೇಕು. ಈ ಅವ್ಯವಸ್ಥೆಯಿಂದ ನಿಜವಾದ ಫಲಾನುಭವಿಗಳು ಬೀದಿಪಾಲಾಗಿದ್ದಾರೆ. ಖುದ್ದು ಮುಖ್ಯಾಧಿಕಾರಿ ಅವರೇ ಆಯ್ಕೆಗೊಂಡ ಫಲಾನುಭವಿಗಳ ಸ್ಥಳಕ್ಕೆ ತೆರಳಿ ಜಿಪಿಎಸ್ ಮಾಡಬೇಕು. ಆಸರೆ ಮನೆಗಳು ಕೇವಲ ಮಹಿಳೆಯರಿಗೆ ಮಾತ್ರ ಎಂದು ಪಪಂ ಹಿಂದಿನ ಮುಖ್ಯಾಧಿಕಾರಿ ಅವರು ಠರಾವು ಬರೆದಿದ್ದಾರೆ. ಆದರೆ ಈಗಿನವರು ಪುರುಷರಿಗೂ ಮನೆಗಳನ್ನು ಆಯ್ಕೆ ಮಾಡಿದ್ದಾರೆ. ಇವುಗಳನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.

ಸುಮಾರು 1,600 ಅರ್ಜಿಗಳು ಫಲಾನುಭವಿಗಳಿಂದ ತಾವು ಸ್ವೀಕರಿಸಿದ್ದು, ಯಾವ ಸ್ಥಳದಲ್ಲಿ 736 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೀರಿ, ವಾರ್ಡ್ ಸಭೆಯ ಫೋಟೋ ಮತ್ತು ಡಾಟಾ ಎಂಟ್ರಿ ಮಾಡಿರುವ ಸ್ಥಳದ ಪೋಟೋ ಒದಗಿಸಬೇಕು ಎಂದು ಪಟ್ಟು ಹಿಡಿದರು.

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಅನಿಲಕುಮಾರ ಕುಲಕರ್ಣಿಯವರು ಖುದ್ದು ನಾನೇ ಸ್ಥಳಕ್ಕೆ ತೆರಳಿ ಜಿಪಿಎಸ್ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಪಪಂ ಸದಸ್ಯರಾದ ಪೃಥ್ವಿರಾಜ ನಾಡಗೌಡ, ಮುತ್ತು ಗೊರಬಾಳ, ಡಾ. ಎಸ್.ಬಿ. ಗಂಗನಗೌಡ್ರ, ಬಸ್ಸು ಗಂಗನಗೌಡ್ರ, ಅಲ್ಲಾಭಕ್ಷ ಮೂಲಿಮನಿ, ಅಮರೇಶ ಸೀರಿ, ರಮೇಶ ಆಲಕೊಪ್ಪರ, ಮಹ್ಮದ ನಾಡದಾಳ, ಸಂಗಣ್ಣ ಬಾರಡ್ಡಿ, ಬಾಬು ಕ್ಷತ್ರಿ, ಶಿವಪುತ್ರಪ್ಪ ಗುರಿಕಾರ ಮನವಿ ಸಲ್ಲಿಸುವ ಸಮಯದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net