ಅರ್ಬನ್​ ಬ್ಯಾಂಕಿಗೆ 1.90 ಕೋಟಿ ರೂ.ಲಾಭ

3HUKKERI2
ಹುಕ್ಕೇರಿ ಪಟ್ಟಣದ ಅರ್ಬನ್​ ಬ್ಯಾಂಕ್​ನ 95ನೇ ವಾರ್ಷಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಶಿವಾನಂದ ನೂಲಿ, ಮೌನೇಶ್ವರ ಪೋತದಾರ, ಸಿ.ಎಂ.ಪಾಟೀಲ, ವಿಜಯ ರವದಿ, ರಾಜು ಗಸ್ತಿ ಮತ್ತಿತರರಿದ್ದರು.
Published on

ಹುಕ್ಕೇರಿ: ಶತಮಾನದ ಸಂಭ್ರಮದಲ್ಲಿರುವ ಸ್ಥಳಿಯ ಅರ್ಬನ್​ ಕೋ ಆಪ್​ ಬ್ಯಾಂಕ್​ ಪ್ರಗತಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ಬ್ಯಾಂಕ್​ ಅಧ್ಯ ಶಿವಾನಂದ ನೂಲಿ ಹೇಳಿದರು.

ಪಟ್ಟಣದ ಎಸ್​.ಕೆ. ಚಿನ್ನರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಬ್ಯಾಂಕ್​ನ 95ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯತೆ ವಹಿಸಿ ಮಾತನಾಡಿದರು. ಬ್ಯಾಂಕ್​ ಸದಸ್ಯರು ಮತ್ತು ಗ್ರಾಹಕರ ಸಹಕಾರದಿಂದ ಈ ಬಾರಿ 1.90 ಕೋಟಿ ರೂ. ಲಾಭ ಹೊಂದುವ ಮೂಲಕ ಅಡಿಟ್​ ವರ್ಗೀಕರಣದಲ್ಲಿ ರಿಸರ್ವ್​ ಬ್ಯಾಂಕ್​ನಿಂದ ಅ ಮಾನ್ಯತೆ ಪಡೆದಿದೆ. ಶ್ರೀ ಬೆಳಗಾವಿಯ ಬಿ.ಕೆ.ಕಂಗ್ರಾಳಿ ಮತ್ತು ಕಿತ್ತೂರ ತಾಲೂಕಿನಲ್ಲಿ ಎರಡು ನೂತನ ಶಾಖೆ ಆರಂಭಿಸಲಾಗುವುದು ಎಂದು ಹೇಳಿದರು. ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಸತ್ಕರಿಸಲಾಯಿತು. ಉಪಾಧ್ಯ ಮೌನೇಶ ಪೋತದಾರ, ನಿರ್ದೇಶಕರಾದ ಗುರುಲಿಂಗ ಗಂಧ, ಸಿ.ಎಂ.ಪಾಟೀಲ, ವಿಜಯ ರವದಿ, ಜಯಗೌಡ ಪಾಟೀಲ, ಸಿದ್ದೇಶ್ವರ ಹೆದ್ದೂರಶೆಟ್ಟಿ, ಸೋಮಶೇಖರ ಪಟ್ಟಣಶೆಟ್ಟಿ, ಸುಭಾಷ ಪಾಟೀಲ, ಗೌರವ್ವ ನಾಯಿಕ, ಮಂಗಲಾ ಹಂದಿಗುಂದ, ರಾಜು ಬಾಗಲಕೋಟಿ, ಬಸವಣ್ಣಿ ಮಗದುಮ್ಮ, ರಾಜು ಗಸ್ತಿ, ಶ್ರೀಶೈಲ ಹುಂಡೆಕರ ಇದ್ದರು. ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಕೆ.ಬಿ.ಬಂದಾಯಿ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಬಸವರಾಜ ಗುಳ್ಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net