ಅರ್ಧ ಗಂಟೆಗೂ ಅಧಿಕ ಭೇಟಿಯಾದ ದಂಪತಿ.

Published on

ಬಳ್ಳಾರಿ : ನಗರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದ ಪತ್ನಿ ವಿಜಯಲಕ್ಷ್ಮಿ ನಟ ದರ್ಶನ್ ನೊಂದಿಗೆ ಅರ್ಧ ಗಂಟೆಗೂ ಅಧಿಕ ಮಾತುಕತೆ ನಡೆಸಿದರು. ಅಲ್ಲದೆ, ದರ್ಶನ್ ನನ್ನು ನೋಡಿ ಬಾವುಕರಾದರು. ಸ್ವತಃ ದರ್ಶನ್ ಅವರೇ ವಿಜಯಲಕ್ಷ್ಮಿ ಅವರಿಗೆ ಧೈರ್ಯ ತುಂಬಿದರು. ಬಳಿಕ, ಡಿಐಜಿ ಟಿ.ಪಿ. ಶೇಷ ಅವರ ಜತೆಯೂ ಚರ್ಚಿಸಿ ಜೈಲಿನಿಂದ ಹೊರ ಬಂದರು. ಹೊರಗಡೆಯಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಜೈಲಿನ ಮುಂಭಾಗದಲ್ಲಿ ವಿಜಯಲಕ್ಷ್ಮಿ ಯನ್ನು ನೋಡಲು ಅಭಿಮಾನಿಗಳು ಹಾಗೂ ಸಾರ್ವಜನಿಕರು ಮುಗಿಬಿದ್ದರು. ಇದೇ ವೇಳೆ ಪರ್ಸ್ ಮರೆತು ಕಾರು ಹತ್ತಿದ್ದ ವಿಜಯಲಕ್ಷ್ಮಿ ಅವರಿಗೆ ಜೈಲು ಸಿಬ್ಬಂದಿ ಕಾರಿನತ್ತ ಬಂದು ಪರ್ಸ್ ನೀಡಿದರು. ಕಳೆದ ಎರಡು ದಿನದಿಂದ ದರ್ಶನ್ ಧರಿಸಿದ್ದ ಬಟ್ಟೆ ಹಾಗೂ ಪರಪ್ಪನ ಜೈಲಿನಿಂದ ತಂದಿದ್ದ ಜ್ಯಾಕೆಟ್ ನ್ನು ಬ್ಯಾಗ್ ನಲ್ಲಿ ತುಂಬಿಕೊಂಡು ಬೆಂಗಳೂರಿನತ್ತ ಪ್ರಯಾಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net