

ಹುಬ್ಬಳ್ಳಿ: ನಗರದ ತೋಳನಕೆರೆ ಹತ್ತಿರ ಬೈಕ್ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಳೇಹುಬ್ಬಳ್ಳಿ ಗುರುನಾಥನಗರದ ನೂರ್ಅಹ್ಮದ್ ಹೈದರಸಾಬ ಮುಲ್ಲಾ (24) ಹಾಗೂ ವಿಜಯನಗರ ಚಂದ್ರನಾಥ ನಗರದ ಅಕ್ಷಯ ರಾಜೇಂದ್ರ ಪ್ರರ್ಣೆಕರ (27) ಬಂಧಿತ ಆರೋಪಿಗಳು. ಅವರಿಂದ 500 ಗ್ರಾಂ ಮಾದಕ ಪದಾರ್ಥ ಅಂದಾಜು ಮೌಲ್ಯ 25 ಸಾವಿರ ರೂ. ಹಾಗೂ ಸಾಗಾಟಕ್ಕೆ ಬಳಸಿದ ರಾಯಲ್ ಎನ್ಫೀಲ್ಡ್ ಥಂಡರ್ ಬರ್ಡ್ ಬೈಕ್ ಮತ್ತು ಎರಡು ಮೊಬೈಲ್ ಫೋನ್, ಆರ್ಸಿ ಬುಕ್, ಡಿಎಲ್ ನಕಲು ಪ್ರತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹು-ಧಾ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಶೈಲ್ ಬ್ಯಾಕೋಡ ಹಾಗೂ ಎಎಸ್ಐ ಎಸ್.ಎಂ. ಹೊಸಮನಿ, ಎ.ಎ. ಮಿರ್ಜಿ, ವಿ.ಬಿ. ಮಾಯಣ್ಣವರ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಆಯುಕ್ತ ಆರ್. ದಿಲೀಪ್ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಎನ್.ಸಿ. ಕಾಡದೇವರ ತನಿಖೆ ಕೈಗೊಂಡಿದ್ದಾರೆ.