ಅರ್ಥಪೂರ್ಣ ರಾಜ್ಯೋತ್ಸವಕ್ಕೆ ನಿರ್ಧಾರ

klb6
ಕಮಲಾಪುರದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಪಶು ಲಸಿಕಾ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ತಹಸೀಲ್ದಾರ್ ಮಹಮ್ಮದ್ ಮೊಹಸಿನ್, ಶಾಂತಪ್ಪ ಹಾದಿಮನಿ, ಶಿವಕುಮಾರ ಶಾಬಾ, ಸುರೇಶ ಲೆಂಗಟಿ ಇತರರಿದ್ದರು.
Published on

ಕಮಲಾಪುರ: ತಾಲೂಕಿನ 10 ಸಾಹಿತಿಗಳಿಗೆ ವಿಶೇಷ ಸತ್ಕಾರ, ಶಾಲಾ-ಕಾಲೇಜುಗಳಲ್ಲಿ ವಿವಿಧ ಕನ್ನಡ ನಾಡು, ನುಡಿ, ಸಾಹಿತ್ಯ ಕುರಿತ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸುವ ಮೂಲಕ ಅರ್ಥಪೂರ್ಣ ಕರ್ನಾಟಕ ರಾಜ್ಯೋತ್ಸವಕ್ಕೆ ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಮಹಮ್ಮದ್ ಮೊಹಸಿನ್ ಹೇಳಿದರು.

ತಹಸಿಲ್ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಹಸೀಲ್ದಾರ್ ಕಚೇರಿ ಎದುರು ನ.1ರ ಬೆಳಗ್ಗೆ 8.30ಕ್ಕೆ ಧ್ವಜಾರೋಹಣದೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಬೇಕು ಎಂದು ಸೂಚಿಸಿದರು.

ವಿಶೇಷ ಸಂದರ್ಭಗಳಲ್ಲಿ ತಾಲೂಕು ಆಡಳಿತದ ಸಭೆಗಳಿಗೆ ಕೆಲವೊಂದು ಇಲಾಖೆ ಸಹಕರಿಸುತ್ತಿಲ್ಲ. ವಿಶೇಷವಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗೈರಾಗುತ್ತಿರುವ ಬಗ್ಗೆ ಜಿ¯್ಲÁಧಿಕಾರಿಗಳಿಗೆ ಪತ್ರ ಬರೆಯವುದಾಗಿ ಎಚ್ಚರಿಸಿದರು.

ಪಶು ವೈದ್ಯಾಧಿಕಾರಿ ಡಾ.ಅನುಜಕುಮಾರ್ ಮಾತನಾಡಿ, ಪಶುಗಳಿಗೆ ಕಾಲುಬಾಯಿ ರೋಗದ ಲಸಿಕಾಕರಣ ಅಭಿಯಾನ ಆರಂಭವಾಗಿದೆ. ಪ್ರತಿಯೊಂದು ಗ್ರಾಮಕ್ಕೂ ತಂಡ ಆಗಮಿಸಿ ಜಾನುವಾರುಗಳಿಗೆ ಲಸಿಕೆ ಹಾಕಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಗ್ರೇಡ್-2 ತಹಸೀಲ್ದಾರ್ ಶಿವಕುಮಾರ ಶಾಬಾ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯP್ಷÀ ಸುರೇಶ ಲೆಂಗಟಿ, ಪ್ರಮುಖರಾದ ಮಿಟ್ಟೆಸಾಬï ಮು¯್ಲÁ, ಪರಮೇಶ್ವರ ಓಕಳಿ, ಅಂಬರೀಶ್, ಕಮಲಾಕರ ಮಹಾಗಾಂವ, ಶರಣಬಸಪ್ಪ ಚಾಲಹಳ್ಳಿ, ರಘುನಂದನ ದ್ಯಾಮಣಿ, ಮಂಜುನಾಥ ಬಿರಾದಾರ್, ಅಶೋಕಕುಮಾರ ಗೌರೆ, ಆನಂದ ವಾರಿಕ್, ಅಂದಪ್ಪ ಓಕಳಿ, ಸಿದ್ದಲಿಂಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net