ಅರ್ಥಪೂರ್ಣ ಜಾತ್ರೆ ಆಚರಿಸೋಣ

21 hbd 01
Published on

ಚಿಟಗುಪ್ಪ: ನವೆಂಬರ್‌ನಲ್ಲಿ ನಡೆಯಲಿರುವ ಚಾಂಗಲೇರಾದ ಶ್ರೀ ವೀರಭದ್ರೇಶ್ವರ ಜಾತ್ರೋತ್ಸವ ಪ್ರಸಕ್ತ ವರ್ಷ ಅತ್ಯಂತ ಸಡಗರ ಸಂಭ್ರಮ, ವೈಭವ ಹಾಗೂ ವೈಶಿಷ್ಠ ಪೂರ್ಣವಾಗಿ ಆಚರಿಸೋಣ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಚಾಂಗಲೇರಾದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ಶ್ರೀ ವೀರಭದ್ರೇಶ್ವರ ಜಾತ್ರೋತ್ಸವ ನಿಮಿತ್ತ ಏರ್ಪಡಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ, ದೀಪಾವಳಿ ಅಮವಾಸ್ಯೆ ನಂತರ ಎರಡನೇ ಮಂಗಳವಾರದಿಂದ ಒಂದು ವಾರ ನಡೆಯುವ ಜಾತ್ರೆ ವೈಭವ ಪೂರ್ಣ, ವಿಜೃಂಭಣೆಯಿAದ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದರು.

ಜಾತ್ರೆಗೆ ರಾಜ್ಯ, ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಶಾಂತಿ ಸುವ್ಯವಸ್ಥೆಗೆ ಮುನ್ನೆಚ್ಚರಿಕೆ ವಹಿಸಬೇಕು. ಸ್ವಚ್ಛತೆಗೆ ನಿಗಾ ವಹಿಸಬೇಕು. ಶೌಚಗೃಹ, ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಿದರು.

ಬಸವಕಲ್ಯಾಣ ಸಹಾಯಕ ಆಯುಕ್ತ ಹಾಗೂ ದೇವಸ್ಥಾನ ಆಡಳಿತಾಧಿಕಾರಿ ಪ್ರಕಾಶ ಕುದರೆ ಪ್ರಾಸ್ತಾವಿಕ ಮಾತನಾಡಿದರು. ಜಾತ್ರೆ ಆಚರಣೆ, ದೇವಸ್ಥಾನದ ಅಭಿವೃದ್ಧಿ ಕುರಿತು ಸಲಹೆ, ಸೂಚನೆ ಚರ್ಚಿಸಲಾಯಿತು. ದೇವಸ್ಥಾನಕ್ಕೆ ಎಲ್ಲ ಮೂಲಗಳಿಂದ ಬಂದ ಹಣ ಹಾಗೂ ಕಳೆದ ಸಾಲಿನ ಜಾತ್ರೆ ಖರ್ಚುವೆಚ್ಚ ಓದಲಾಯಿತು. ಉತ್ಸವದ ವಿವಿಧ ಸಮಿತಿ ರಚಿಸಲಾಯಿತು. ದೇವಸ್ಥಾನದ ಯಾತ್ರಿ ನಿವಾಸ, ಗೋಶಾಲೆ, ವಸತಿ ಗೃಹಗಳ, ಶೌಚಗೃಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಹಸೀಲ್ದಾರ್ ರವೀಂದ್ರ ದಾಮಾ, ಇಓ ಅನಂತರಾವ ಕುಲಕರ್ಣಿ, ತಾಪಂ ಇಓ ಅಕ್ರಂ ಪಾಶಾ, ಕಂದಾಯ ನಿರೀಕ್ಷಕ ಮಹೇಶಕುಮಾರ ಅನಂತವಾಡಕರ್, ಪಿಡಿಒ ವಿಜಯಕುಮಾರ ಬುಳ್ಳಾ, ಪ್ರಮುಖರಾದ ಪ್ರಭು ಸಾವಳಗಿ, ಸುರೇಶ ಮಾಶಟ್ಟಿ, ಶಿವಕುಮಾರ ಸ್ವಾಮಿ, ವಿಜಯಕುಮಾರ ರಾಜಗೀರ, ವಿಜಯಕುಮಾರ ವಾಲಿ, ರಾಜಶೇಖರ ಮಳ್ಳಿ, ಪಪ್ಪು ಸ್ವಾಮಿ, ಜಗನ್ನಾಥ ಬೇಡರ್, ರಾಮಲು ಮಂತ್ರಿ, ವೀರಪ್ಪ ಪೂಜಾರಿ, ರಮೇಶ ರಾಠೋಡ್, ತುಕಾರಾಮ ಮಂತ್ರಿ, ಸಾಗರ ಮಡಿವಾಳ, ವೀರಣ್ಣ ಗೊಲ್ಲಾ, ಪ್ರಶಾಂತ ಸಿಂದೋಲ, ಚಂದನಕುಮಾರ ಪಾಟೀಲ್, ಸಿ.ವಿ.ಪಾಟೀಲ್, ರಾಮಯ್ಯ ಶಾಸ್ತಿ ಇತರರಿದ್ದರು. ಕಾರ್ಯದರ್ಶಿ ಸಂಜುರಾವ ದೇಸಾಯಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net