ಅರ್ಜುನ ಸಾವಿನ ಪ್ರಕರಣ:ಎರಡನೇ ದಿನವು ಮುಂದುವರೆದ ತನಿಖೆ

ಅರ್ಜುನ ಸಾವಿನ ಪ್ರಕರಣ:ಎರಡನೇ ದಿನವು ಮುಂದುವರೆದ ತನಿಖೆ
Published on

ಹಾಸನ: ಅರ್ಜುನ ಆನೆ ಸಾವಿನ ಪ್ರಕರಣದ ತನಿಖೆಗೆ ಬಂದಿರುವ ವಿಶೇಷ ತನಿಖಾ ತಂಡ ಶುಕ್ರವಾರ ಕೂಡ ನಗರದ ಅರಣ್ಯ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನು ತನಿಖೆ ನಡೆಸಿದರು.
ವಿಶೇಷ ತನಿಖಾಧಿಕಾರಿ ನಿವೃತ್ತ ಮುಖ್ಯ ವನ್ಯಪಾಲಕ ಅಜಯ್ ಮಿಶ್ರಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಅಧಿಕಾರಿಗಳು, ಮಾವುತರು, ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ. ಶುಕ್ರವಾರ ಆನೆ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ ಎಲಿಫ್ಯಾಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದರು.
ಗುರುವಾರ ಅರ್ಜುನನ ಸಮಾಧಿ ಸ್ಥಳವಾದ ಸಕಲೇಶಪುರ ತಾಲೂಕು ಯಾಸಳೂರು ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ತನಿಖಾ ತಂಡ ನೆನ್ನೆ ಮಧ್ಯಾಹ್ನ ದಿಂದ ತನಿಖೆ ಆರಂಭಿಸಿ ರಾತ್ರಿ ಸುಮಾರು 10 ಗಂಟೆ ವರೆಗೂ ತನಿಖೆ ನಡೆಸಿದರು ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಇನ್ನಿತರೆ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿದ್ದಾರೆ.
ಶುಕ್ರವಾರ ಕೂಡ ತನಿಖೆ ಮುಂದುವರೆದಿದ್ದು, ಡಾಟ್ ಗೆ ಬಳಸಿದ ಗನ್, ಔಷದಿ ಬಗ್ಗೆಯೂ ವೈದ್ಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಾರ್ಯಾಚರಣೆ ವೇಳೆ ಇದ್ದ ಪ್ರತಿಯೊಬ್ಬರನ್ನೂ ತೀವ್ರ ವಿಚಾರಣೆ ನಡೆಸುತ್ತಿರುವ ತನಿಖಾ ತಂಡ ಮಹತ್ವದ ವಿಚಾರಗಳ ಬಗ್ಗೆ ಇಂಚಿಂಚೂ ಮಾಹಿತಿ ಕಲೆ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net