ಅರ್ಜುನ ಕಪ್ ಇಂದಿನಿಂದ ಆರಂಭ

Cricket
Published on

ಚಿತ್ರದುರ್ಗ: ದುರ್ಗಾ ಇಲೆವೆನ್ ಕ್ರಿಕೆಟರ್ಸ್‌ನಿಂದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಅರ್ಜುನ ಕಪ್-2023 ಲೀಗ್ ಕಮ್ ನಾಕೌಟ್ ಕ್ರಿಕೆಟ್ ಪಂದ್ಯಾವಳಿಯನ್ನು ಡಿ. 20ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ.

ಸತತ ಎಂಟು ಬಾರಿ ದಸರಾ ಅಂಬಾರಿ ಹೊತ್ತ ಆನೆ ಅರ್ಜುನನ ಸ್ಮರಣಾರ್ಥ ಹೊನಲು-ಬೆಳಕಿನ ಟೆನ್ನಿಸ್ ಬಾಲ್ ಟೂರ್ನಿ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮುಖಂಡ ಬಿ.ಕಾಂತರಾಜ್ ತಿಳಿಸಿದರು.

ಮಹಾನ್ ನಾಯಕರ ಸ್ಮರಣಾರ್ಥ, ಸಿನಿಮಾ ನಟರ ಹೆಸರಿನಲ್ಲಿ ಪಂದ್ಯಾವಳಿ ಆಯೋಜಿಸುವುದು ಸಾಮಾನ್ಯ. ಆದರೆ, ಆನೆ ಸ್ಮರಣಾರ್ಥ ರಾಜ್ಯದಲ್ಲಿ ಇದೇ ಪ್ರಥಮವಾಗಿ ನಡೆಯುತ್ತಿದ್ದು, ಚೆನೈ ಸೇರಿ ಕರ್ನಾಟಕದ ವಿವಿಧ ಭಾಗಗಳ 35 ತಂಡ ನೋಂದಾಯಿಸಿಕೊಂಡಿವೆ ಎಂದರು.

20ರಂದು ಸಂಜೆ 6ಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ ನೀಡಲಿದ್ದಾರೆ. ಅರ್ಜುನ ಆನೆಯ ಮಾವುತರಾದ ರಾಜ, ವಿನು ಅವರನ್ನು ಕರೆಯಿಸಿ ಗೌರವಿಸಲಾಗುವುದು. 23ರಂದು ಸಂಪನ್ಮೂಲ ವ್ಯಕ್ತಿ ಧರ್ಮೆಂದ್ರಕುಮಾರ್ ಆನೆಗಳ ಕುರಿತು ಮಾಹಿತಿ ನೀಡಲಿದ್ದಾರೆ. 24ರ ಸಮಾರೋಪದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಹುಮಾನ: ಅರ್ಜುನ ಟ್ರೋಫಿಯೊಂದಿಗೆ ಪ್ರಥಮ 2 ಲಕ್ಷ ರೂ., ಬಲರಾಮ-ದ್ವಿತೀಯ 1 ಲಕ್ಷ ರೂ., ದ್ರೋಣ ಟ್ರೋಫಿ ತೃತೀಯ 50 ಸಾವಿರ ನಗದು ಬಹುಮಾನ ನೀಡಲಾಗುವುದು. ಇದರ ಜತೆಗೆ ಉತ್ತಮ ಬ್ಯಾಟ್ಸ್‌ಮನ್, ಬೌಲರ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.

ಉದ್ಯಮಿ ಸುರೇಶ್‌ಬಾಬು, ಮುಖಂಡರಾದ ಗೋಪಾಲಸ್ವಾಮಿ ನಾಯಕ, ಪರಮೇಶ್, ಸಿದ್ದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net