ಅರ್ಜುನ ಆನೆಗೆ ದೀಪ ನಮನ

Namana
Published on

ಚಿತ್ರದುರ್ಗ: ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತು ನಾಡಸೇವೆಯಲ್ಲಿ ಭಾಗಿಯಾಗಿದ್ದ ಅರ್ಜುನ ಆನೆ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಚಿತ್ರದುರ್ಗದ ಮದಕರಿನಾಯಕ ವೃತ್ತದಲ್ಲಿ ಮಂಗಳವಾರ ದೀಪ ನಮನ ಸಲ್ಲಿಸಿದರು.

ಪ್ರಾಣಿ ಪ್ರಿಯೆ ಸ್ಪೂರ್ತಿ, ಗ್ರೀನ್ ಕರ್ನಾಟಕ ಟೀಮ್ ಆಯುಕ್ತ ಡಾ.ಎಂ.ಸಿ.ನರಹರಿ, ವೇದಿಕೆ ಪದಾಧಿಕಾರಿಗಳಾದ ಮಾಲತೇಶ್ ಅರಸ್, ಟಿ.ರುದ್ರಮುನಿ, ಎಸ್.ರಾಘವೇಂದ್ರ, ಬಳಗದ ಪದಾಧಿಕಾರಿಗಳಾದ ರವಿಕುಮಾರ್, ಮಂಜುನಾಥ್, ಕ್ಯಾತಣ್ಣ, ತಿಮ್ಮಣ್ಣ, ಉಮಾಪತಿ, ಪಲ್ಲವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net