

ಚಿತ್ರದುರ್ಗ:ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ,ವಿವಿಧ ಯೋಜನೆಗಳಡಿ ಅಲೆಮಾರಿ,ಅರೆಅಲೆಮಾರಿ ಸಮುದಾಯದವರಿಂದ ಸಾಲಸೌಲಭ್ಯಕ್ಕೆ ಆನ್‌ಲೈನ್ ಮೂಲಕ ನವೆಂಬರ್ 3ರೊಳಗೆ ಅರ್ಜಿ ಆಹ್ವಾನಿಸಿದೆ. ಶಿಕ್ಷಣ ಸಾಲಕ್ಕೆ ಕೊನೆ ದಿನಾಂಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08194-220882ನ್ನು ಸಂಪರ್ಕಿಸುವಂತೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.