ಅರ್ಚಕರು, ಪುರೋಹಿತರ ಸಂಘದ ಮಹಾಸಭೆ

ಅರ್ಚಕರ ಸಭೆ
ಸೋಮವಾರಪೇಟೆ ವಿರಕ್ತ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮೋಹನಮೂರ್ತಿ ಶಾಸ್ತ್ರಿ ಮಾತನಾಡಿದರು. ಶ್ರೀ ಸದಾಶಿವ ಸ್ವಾಮೀಜಿ, ಶಾಂತಮಲ್ಲಯ್ಯ, ಸೋಮಶೇಖರ, ವೇದಮೂರ್ತಿ ಇದ್ದರು.
Published on

ಸೋಮವಾರಪೇಟೆ: ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರು ಹಾಗೂ ಪುರೋಹಿತರ ಸಂಘದ ವಾರ್ಷಿಕ ಮಹಾಸಭೆ ಮಂಗಳವಾರ ವಿರಕ್ತಮಠದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಮೋಹನಮೂರ್ತಿ ಶಾಸ್ತ್ರಿ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಸಂಘದ ಬೆಳವಣಿಗೆ, ಕಟ್ಟಡ ನಿರ್ಮಾಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಸಾನ್ನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿರುವ ವೀರಶೈವ-ಲಿಂಗಾಯತ ಅರ್ಚಕರು ಸಂಘಟಿತರಾಗಬೇಕು. ಸಂಘಟನೆಯಲ್ಲಿ ಬಲವಿದೆ ಎಂಬುದನ್ನು ಅರಿತುಕೊಳ್ಳಬೇಕು. ಅರ್ಚಕರಿಗೂ ಸಮಾಜದಲ್ಲಿ ಗೌರವವಿದೆ, ಜವಾಬ್ದಾರಿಯಿದೆ. ಅದನ್ನು ಅರಿತು ನಡೆಯಬೇಕೆಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಶಾಂತಮಲ್ಲಯ್ಯ ಶಾಸ್ತ್ರಿ, ಕಾರ್ಯದರ್ಶಿ ಸೋಮಶೇಖರ ಶಾಸ್ತ್ರಿ, ಖಜಾಂಚಿ ವೇದಮೂರ್ತಿ, ನಿರ್ದೇಶಕರಾದ ಯೋಗೇಶ್ ಶಾಸ್ತ್ರಿ, ನಂದೀಶ್ ಶಾಸ್ತ್ರಿ ಮಹೇಶ್, ಚಂದ್ರಶೇಖರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net