ಅರೇಬಿಕಾ ಕಾಫಿ ಗಿಡಗಳಲ್ಲಿ ಅರಳಿದ ಹೂವು

5spt4
Published on

ಸೋಮವಾರಪೇಟೆ: ತಾಲೂಕಿನಲ್ಲಿ ಬಹುತೇಕ ಗ್ರಾಮೀಣ ಭಾಗದಲ್ಲಿ ಕಳೆದ 8 ದಿನಗಳ ಹಿಂದೆ ಮಳೆ ಸುರಿದ ಹಿನ್ನೆಲೆಯಲ್ಲಿ ಅರೇಬಿಕಾ ಕಾಫಿ ಗಿಡಗಳಲ್ಲಿ ಹೂ ಅರಳಿ, ಜೇನ್ನೊಣಗಳು ಝೇಂಕರಿಸುತ್ತಿವೆ.


ಕಾಫಿ ತೋಟಗಳು ಶ್ವೇತಸುಂದರಿಯಂತೆ ಕಂಗೊಳಿಸುತ್ತಿವೆ. ಪ್ರವಾಸಿಗರಂತೂ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಒಂದೂವರೇ ತಿಂಗಳು ವಿಳಂಬವಾಗಿ ಸುರಿದರೂ ಮಳೆಯಿಂದ ಕಾಫಿ ಬೆಳೆಗಾರರು ಹರ್ಷಗೊಂಡಿದ್ದಾರೆ. ಸುಗಿ ಉತ್ಸವ ನಂತರ ಮಳೆ ಸುರಿದಿರುವುದು ಪ್ರಕೃತಿ ಅರಾಧಕರ ನಂಬಿಕೆ ಹೆಚ್ಚಿಸಿದೆ. ಹೂಮಳೆ ಬೀಳದ ಸ್ಥಳಗಳಲ್ಲಿ ರೈತರು ಉತ್ತಮ ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಹೂ ಅರಳಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಜನರು ಕಾಫಿ ತೋಟಗಳು ಹೂಪೂಜೆ ಮಾಡಿದರು. ಕಳೆದ ವರ್ಷ ಫೆಬ್ರವರಿ ಎರಡನೇ ವಾರದಲ್ಲಿ ಹೂಮಳೆ ಸುರಿದು, ನಂತರವೂ ಉತ್ತಮ ಮಳೆ ಆಗಿತ್ತು. ಮೇ ಮೊದಲ ವಾರದ ತನಕ 9ಇಂಚು ಮಳೆ ಬಿದ್ದಿತ್ತು. ಈ ವರ್ಷ ಕೇವಲ ಒಂದು ಇಂಚು ಮಳೆ ಬಿದ್ದಿದೆ. ಒಂದು ವಾರದ ನಂತರ ಎರಡು ಇಂಚು ಮಳೆ ಸುರಿದರೆ ಮಾತ್ರ ಕಾಫಿ ತೋಟಗಳಲ್ಲಿ ಫಸಲಿನ ನಿರೀಕ್ಷೆ ಮಾಡಬಹುದು ಎಂದು ಕಾಫಿ ಬೆಳೆಗಾರ ಎಚ್.ಎಸ್.ಸಮೃದ್ಧ್ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net