ಅರೆಬರೆ ಮಾಹಿತಿಗೆ ಕೇಂದ್ರ ಸಚಿವ ಗರಂ,ದಿಶಾ ಸಭೆ ಮುಂದಕ್ಕೆ

DSC_0018 (1)--02
Published on

ಚಿತ್ರದುರ್ಗ: ಕೆಲವು ಇಲಾಖೆಗಳು ಹಾಗೂ ನಿಗಮ,ಮಂಡಳಿಗಳ ಅಧಿಕಾರಿಗಳು ಸೂಕ್ತ ಮಾಹಿತಿಯೊಂದಿಗೆ ಬಂದಿಲ್ಲವೆಂಬ ಆಕ್ರೋಶದಲ್ಲಿ ದಿಶಾ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರು ಶನಿವಾರ ಸಭೆ ಮುಂದೂಡಿದರು.
ಜಿಪಂದಲ್ಲಿ ಕರೆದಿದ್ದ ಸಭೆಗೆ ಕೆಲವು ಅಧಿಕಾರಿಗಳು ಅರೆಬರೆ ಮಾಹಿತಿಯೊಂದಿಗೆ,ಚಲ್ತಾಹೈ ಎಂಬ ನಿರ್ಲಕ್ಷೃ ಧೋರಣೆಯೊಂದಿಗೆ ಬಂದಿದ್ದು ಸಚಿವರನ್ನು ಕೆರಳಿಸಿತು. ನಿರ್ಮಿತಿ ಕೇಂದ್ರ,ಲೀಡ್‌ಬ್ಯಾಂಕ್,ಬೆಸ್ಕಾಂ,ಕೆಪಿಟಿಸಿಎಲ್,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತಿತರ ಇಲಾಖೆಗಳ ಅಧಿಕಾರಿಗಳ ವರದಿಗಳು ಅಪೂರ್ಣವಾಗಿವೆ ಎಂದು ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿ ದರು.
ಹಲವು ಬಾರಿ ಸೂಚಿಸಿದರೂ ಸಮರ್ಪಕವಾಗಿ ವರದಿಗಳನ್ನು ಸಲ್ಲಿಸುತ್ತಿಲ್ಲ. ಬದ್ಧತೆಯಿಂದ ಕೆಲವರು ಕೆಲಸ ಮಾಡುತ್ತಿಲ್ಲ. ಹೀಗಾದರೆ ಜನಪ್ರತಿನಿಧಿಗಳಾದ ನಾವು ಮತದಾರರ ಋಣ ತೀರಿಸಲು ಹೇಗೆ ಸಾಧ್ಯವಾದೀತು ಎಂದು ಗರಂ ಆದ ಸಚಿವರು,ಮುಂದಿನ ಸಭೆಗೆ ಸೂಕ್ತ ಮಾಹಿತಿಗಳೊಂದಿಗೆ ಬರುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮೆಡಿಕಲ್ ಕಾಲೇಜು
ಪ್ರಸಕ್ತ ವರ್ಷದಿಂದಲೇ ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಬೇಕು,ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕಟ್ಟಡ ಪಡೆದು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಇದಕ್ಕಾಗಿ ಡಿಎಂಎಫ್ ನಿಧಿಯಡಿ ಅನುದಾನ ಭರಿಸುವಂತೆ ಅಧಿಕಾರಿಗಳಿಗೆ ಸೂ ಚಿಸಿದರು.
ಮಾಹಿತಿ ನೀಡಿದ ವಿಶೇಷಾಧಿಕಾರಿ ಡಾ.ಯುವರಾಜ್ ಅವರು,ಪ್ರಸಕ್ತ ವರ್ಷದಿಂದಲೇ ಪ್ರವೇಶ ಪ್ರಾರಂಭವಾಗುತ್ತಿದೆ, ತಾತ್ಕಾಲಿಕವಾ ಗಿ ಜಿ.ಆರ್.ಹಳ್ಳಿ ದಾವಣಗೆರೆ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆವರಣದಲ್ಲಿನ ಕಟ್ಟಡದಲ್ಲಿ ಪ್ರಾರಂಭಿಸಲಾಗುತ್ತಿದೆ. ಆದರೆ ಕ ಟ್ಟಡವನ್ನು ನಮಗೆ ಹಸ್ತಾಂತರವಾಗಿಲ್ಲ. ಸರ್ಕಾರದಿಂದ ಅಗತ್ಯ ಅನುದಾನವೂ ಬಿಡುಗಡೆ ಆಗಬೇಕಿದೆ ಎಂದರು.
ಈವರೆಗೂ ಕಟ್ಟಡ ಹಸ್ತಾಂತರವಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು ಸಚಿವರು,ವೈದ್ಯಕೀಯ ವ್ಯಾಸಂಗಕ್ಕೆ ದುರ್ಗವನ್ನು ಆ ಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಬೇಸರಿಸಿಕೊಳ್ಳುವಂತಾಗಬಾರದು. ಕಾಲೇಜಿಗೆ ಅಗತ್ಯ ಪೀಠೋಪಕರಣ,ಬೋಧನಾ ಸಾಮಗ್ರಿ ಇ ತ್ಯಾದಿ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದರು.
ಕವಾಡಿಗರಹಟ್ಟಿ ಪ್ರಕರಣ ಪ್ರಸ್ತಾಪಿಸಿದ ಸಚಿವರು,ನೀರಿನ ಸಂಗ್ರಹಾರಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕೆಂಬ ನಿರ್ದೇಶನದ ನಿರ್ಲಕ್ಷೃ ಸಲ್ಲ. ಜಲ ಸಂಗ್ರಹಾರಗಳ ಸ್ವಚ್ಛತೆಗೆ ಸಂಬಂಧಿಸಿದಂತೆ,ದಿನವಹಿ ನಿರ್ವಹಿಸಬೇಕು.ನಮ್ಮ ಜಿಲ್ಲೆ ಮಾದರಿ ಈ ನಿಟ್ಟಿನಲ್ಲಿ ಆಗ ಬೇಕೆ ಂದರು. ಜಲಜೀವನ ಮಿಷನ್ ಗುಣಮಟ್ಟದ ಕಾಮಗಾರಿ ಆಗ ಬೇಕೆಂದರು. ಎಡಿಸಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ,ಜಿ.ಪಂ.ಉಪ ಕಾರ‌್ಯದರ್ಶಿ ತಿಮ್ಮಪ್ಪ ಮತ್ತಿತರರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net