ಅರೆಕಾಲಿಕ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

Published on

ಚಾಮರಾಜನಗರ: ಕೇಂದ್ರ ಸರ್ಕಾರದ ಮಿಷನ್ ವಾತ್ಸಲ್ಯ-2022ರ ಮಾರ್ಗಸೂಚಿಯನ್ವಯ ಜಿಲ್ಲೆಯ ಬಾಲಕಿಯರ ಸರ್ಕಾರಿ ಬಾಲಮಂದಿರಕ್ಕೆ ಅರೆಕಾಲಿಕ ಬೋಧಕರನ್ನು ನೇಮಕ ಮಾಡಿಕೊಳ್ಳಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿರುವ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ದಾಖಲಾಗಿರುವ ನಿವಾಸಿ ಮಕ್ಕಳ ಹಿತದೃಷ್ಟಿಯಿಂದ ಪಠ್ಯ ಚಟುವಟಿಕೆಗಳಾದ ಇಂಗ್ಲೀಷ್, ವಿಜ್ಞಾನ ಮತ್ತು ಗಣಿತ ಹಾಗೂ ಪಠ್ಯೇತರ ಚಟುವಟಿಕೆಗಳಾದ ಸಂಗೀತ, ಕ್ರ್‌ಟಾ, ಕಲಾ ವಿಷಯಗಳಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ, ಸಂಗೀತ, ಕ್ರ್‌ಟಾ, ಕಲಾ ವಿಷಯಗಳಿಗೆ ವಿಷಯವಾರು 1 ಹುದ್ದೆ ನಿಗದಿಯಾಗಿದ್ದು ಇಂಗ್ಲೀಷ್ ಭೋಧಕ ಹುದ್ದೆಗೆ ಬಿ.ಎ ಪದವಿ (ಐಚ್ಛಿಕ ಭಾಷೆ ಇಂಗ್ಲೀಷ್) ಜೊತೆಗೆ ಬಿ.ಇಡಿ ಪದವಿ ಅಥವಾ ಎಂ.ಎ ಪದವಿ (ಐಚ್ಛಿಕ ಭಾಷೆ ಇಂಗ್ಲೀಷ್) ಜೊತೆಗೆ ಬಿ.ಇಡಿ ಪದವಿ ವಿದ್ಯಾರ್ಹತೆ ಹೊಂದಿರಬೇಕು.

ಗಣಿತ ಮತ್ತು ವಿಜ್ಞಾನ ಭೋಧಕ ಹುದ್ದೆಗೆ ಬಿಎಸ್ಸಿ ಪದವಿ (ಐಚ್ಛಿಕ ಭಾಷೆ ಗಣಿತ ಮತ್ತು ವಿಜ್ಞಾನ) ಜೊತೆಗೆ ಬಿ.ಇಡಿ ಪದವಿ ಅಥವಾ ಎಂಎಸ್ಸಿ ಪದವಿ (ಐಚ್ಛಿಕ ಭಾಷೆ ಗಣಿತ ಅಥವಾ ವಿಜ್ಞಾನ) ಜೊತೆಗೆ ಬಿಇಡಿ ಪದವಿ ಹಾಗೂ ಸಂಗೀತ, ಕ್ರ್‌ಟಾ, ಕಲಾ ವಿಷಯಗಳಿಗೆ ಸಂಗೀತ, ಕ್ರ್‌ಟಾ, ಕಲಾ ವಿಷಯಗಳಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು.

ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ಎಲ್ಲಾ ದಾಖಲಾತಿಗಳನ್ನು ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೆ.10ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ. 08226-222354 ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net