

ಕೊಪ್ಪಳ: ಸಾಹಿತಿ ಅರುಣಾ ನರೇಂದ್ರ ಅವರ ‘ನೇಸರ ನೋಡು’ ಪುಸ್ತಕ ಮಕ್ಕಳ ಸಾಹಿತ್ಯ ಉತ್ಸವ ಹಾಗೂ ಚಲವ ಚಿಣ್ಣರು ರಾಜ್ಯ ಮಟ್ಟದ ಪುಸ್ಕತ ಬಹುಮಾನಕ್ಕೆ ಆಯ್ಕೆಯಾಗಿದೆ.
ಭಾನುವಾರ ರಾಯಚೂರಿನಲ್ಲಿ ಮಕ್ಕಳ ಸಾಹಿತ್ಯ ಪರಿಷತ್‌ನಿಂದ ನಡೆದ ಕಾರ್ಯಕ್ರಮದಲ್ಲಿ 9 ಕವಿಗಳಿಗೆ 2019ರಿಂದ 2022ವರೆಗಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2019ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಅರುಣಾ ನರೇಂದ್ರ ಅವರ ‘ನೇಸರ ನೋಡು’ ಮಕ್ಕಳ ಕವನ ಸಂಕಲನ ಹಾಗೂ ತಮ್ಮಣ್ಣ ಬೀಗಾರ ಅವರ ಮಕ್ಕಳ ಕಥಾ ಸಂಕಲನ ‘ಉಲ್ಟಾ ಅಂಗಿ’ ಆಯ್ಕೆಯಾಗಿವೆ. ಇಬ್ಬರಿಗೂ ಒಟ್ಟಿಗೆ ಪುಸ್ತಕ ಬಹುಮಾನ ಪ್ರಧಾನ ಮಾಡಿ ಗೌರವಿಸಲಾಯಿತು. ರಾಯಚೂರು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಕರ ದೇವರು, ಪ್ರೊ. ಶಾಶ್ವತ ಸ್ವಾಮಿ ಮುಕ್ಕುಂದಿ ಮಠ, ಗಿರಿರಾಜ ಹೊಸಮನಿ, ಅಯ್ಯಪ್ಪಯ್ಯ ಹುಡಾ, ಮಂಡಲಗಿರಿ ಪ್ರಸನ್ನ, ಮಹೇಶ ಮಸ್ಕಿ ಇತರರಿದ್ದರು.