

ಚಿತ್ರದುರ್ಗ: ಮಕ್ಕಳಲ್ಲಿ ಆರೋಗ್ಯಕರ ಹವ್ಯಾಸಗಳ ಬೆಳವಣಿಗೆಯಿಂದ ಅವರ ಸರ್ವಾಂಗೀಣ ವಿಕಾಸ ಸಾಧ್ಯವಾಗಲಿದೆ ಎಂದು ಜಿಲ್ಲಾ ನೋಡಲ್ ಅಧಿಕಾರಿ ಎಸ್.ಸಿ.ಪ್ರಸಾದ್ ಹೇಳಿದರು.
ನಗರದ ಡಯಟ್‌ನಲ್ಲಿ ಬುಧವಾರ ಜಿಲ್ಲೆಯ ಬಿಆರ್‌ಸಿಗಳಿಗೆ ಸಂಭ್ರಮ ಶನಿವಾರ ಕಾರ‌್ಯಕ್ರಮ ಅನುಷ್ಠಾನ ಪ್ರಗತಿ ಕುರಿತಂತೆ ಆನ್‌ಲೈನ್ ಮೀಟಿ ಂಗ್‌ನಲ್ಲಿ ಮಾತನಾಡಿದ ಅವರು,ಪ್ರತಿ ತಿಂಗಳ 3ನೇ ಶನಿವಾರ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ. ಒಂದರಿಂದ 8ನೇ ತರಗತಿ ಅ ರಿ ವು,ಅನುಭವ ಮತ್ತು ಅವಲೋಕನಗಳನ್ನಾಧರಿಸಿ ಈ ಕಾರ‌್ಯಕ್ರಮ ರೂಪಿಸಲಾಗಿದೆ ಎಂದರು.
ಉಪನ್ಯಾಸಕ ಜಿ.ಎಸ್.ನಾಗರಾಜು ಮಾತನಾಡಿ,ಸಂಭ್ರಮ ಶನಿವಾರ ಕಾರ‌್ಯಕ್ರಮದ ಮಾಹಿತಿಯನ್ನು ಪೋಟೊ ಸಹಿತ ವರದಿ ಡಯಟ್ ಕಚೇರಿಗೆ ಸಲ್ಲಿಸಬೇಕು ಹಾಗೂ ಉತ್ತಮ ಗುಣಮಟ್ಟದ ವಿಡಿಯೊಗಳನ್ನು ಕಳಿಸಿದರೆ ಡಯಟ್ ವೆಬ್‌ಸೈಟ್ ಪ್ರಕಟಿಸಲಾಗುವುದು ಎಂದರು.
ಉಪನ್ಯಾಸಕ ರಾದ ಎಸ್.ಬಸವರಾಜು,ಕೆ.ಜಿ.ಪ್ರಶಾಂತ್,ಯು.ಸಿದ್ದೇಶಿ,ಬಿ.ಆರ್.ಸಿಗಳಾದ ತಿಪ್ಪೇರುದ್ರಪ್ಪ, ಶ್ರೀನಿವಾಸ್,ಸುರೇಂದ್ರನಾಥ್,ತಾಂತ್ರಿಕ ಸಹಾಯ ಕರಾದ ಕೆ.ಆರ್.ಲೋಕೇಶ್,ಆರ್.ಲಿಂಗರಾಜು ಮತ್ತಿತರರು ಇದ್ದರು.