

ಕಾಗವಾಡ: ಶಿಕ್ಷಣ ಎಂದರೆ ಅಕ್ಷರಗಳನ್ನು ಕಲಿಯುವುದಲ್ಲ. ನಮ್ಮಲ್ಲಿರುವ ಅರಿವನ್ನು ವೃದ್ಧಿಸಿ, ಪ್ರಬುದ್ಧರಾಗಿ ಪರಿವರ್ತನೆ ಗೊಳ್ಳುವುದೇ ಶಿಕ್ಷಣದ ಸಾರ ಎಂದು ಅಥಣಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.
ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಗಳ ಉದ್ಘಾಟನೆ ಹಾಗೂ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಸರಸ್ವತಿ ದೇವಿ ಪೂಜೆಯೊಂದಿಗೆ ಸಸಿಗೆ ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಗಣ್ಯರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಡಾ.ಶೀತಲ ನ್ಯಾಮಗೌಡರ, ಸನ್ಮತಿ ಸಹಕಾರಿ ಶಿಕ್ಷಣ ಸಮಿತಿ ಅಧ್ಯಕ್ಷ ವಿನೋದ ಬರಗಾಲಿ, ಉಪಾಧ್ಯಕ್ಷ ಅಜಿತ ನಾಂದ್ರೆ, ಸನ್ಮತಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರಾಘವೇಂದ್ರ ಸಂಗೋರಾಮ, ಸನ್ಮತಿ ಸಹಕಾರ ಶಿಕ್ಷಣ ಸಮಿತಿ ನಿರ್ದೇಶಕರಾದ ಡಾ. ಅಶೋಕ ಪಾಟೀಲ, ಅಶ್ವಥ ಪಾಟೀಲ, ಸನ್ಮತಿ ವಿದ್ಯಾಲಯದ ಗೌವರ್ನಿಂಗ್ ಬಾಡಿ ಸದಸ್ಯರಾದ ನೇಮಗೌಡ ಪಾಟೀಲ, ಯಶವಂತ ಜಾಧವ, ನಿವೃತ್ತ ಪ್ರಾಚಾರ್ಯ ಕೆ.ಬಿ. ಸಮಾಜ, ಹಾಲಿ ಪ್ರಾಚಾರ್ಯ ಬಾಹುಬಲಿ ಬಣಜವಾಡೆ, ಸಂಸ್ಥೆಯ ಸಿಇಒ ಸತೀಶ ಪಾಟೀಲ ಸೇರಿ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.