

ಬಸವಕಲ್ಯಾಣ: ವಚನ ಸಾಹಿತ್ಯ ಮರೆವಿನಿಂದ ಅರಿವಿನೆಡೆಗೆ, ನಿರಾಶೆಯಿಂದ ಸದಾಶಯದೆಡೆಗೆ, ಅನಿಶ್ಚಿತತೆಯಿಂದ ಸುನಿಶ್ಚಿತತೆಯೆಡೆಗೆ ಕೈಹಿಡಿದು ಕರೆದೊಯ್ಯುತ್ತದೆ ಎಂದು ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ನುಡಿದರು.
ಅಂತಾರಾಷ್ಟಿಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ಹರಳಯ್ಯ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯ ಕೊನೆಯ ದಿನವಾದ ಮಂಗಳವಾರ ಏರ್ಪಡಿಸಿದ್ದ ವಚನ ಪಠಣ ಕಾರ್ಯಕ್ರಮದಲ್ಲಿ ಮಾತನಾಡಿ, ನಿತ್ಯ ಶರಣರ ವಚನ ಓದಬೇಕು. ಶರಣರ ಪ್ರತಿ ವಚನಗಳು ವ್ಯಕ್ತಿಯನ್ನು ಭಾವ ವಿಕಾಸದತ್ತ ತೆಗೆದುಕೊಂಡು ಹೋಗಲು ಪ್ರೇರೇಪಿಸುತ್ತದೆ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾವಿರಾರು ಶರಣರು ಹುತಾತ್ಮರಾಗಿ ಲಿಂಗಾಯತ ಧರ್ಮ ರಕ್ಷಿಸಿದ್ದಾರೆ. ಬಸವಧರ್ಮ ಸಂಸ್ಕೃತಿಗೆ ಸಂಬಂಧಿಸಿದ ವಿಚಾರ ಧಾರೆ ಧರೆಯುದ್ದಗಲಕ್ಕೂ ಬಿತ್ತುವ ಮಹಾಕಾಯಕ ಪ್ರಸ್ತುತವಾಗಿದೆ. ಜೀವನವಿರುವವರೆಗೂ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡೋಣ ಎಂದರು.
ಶ್ರೀ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಡಾ.ಗಂಗಾಂಬಿಕಾ ಅಕ್ಕ, ನೀಲಾಂಬಿಕಾ ಶಿವಯೋಗ ಕೇಂದ್ರದ ಪೂಜ್ಯ ಗಾಯತ್ರಿ ತಾಯಿ ಮಾತನಾಡಿದರು. ಬಿಡಿಪಿಸಿ ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಚಿತ್ರಲೇಖಾ ಪಾಟೀಲ್, ಮಂಗಲಾ ಗುಳಶೆಟ್ಟಿ ಇತರರಿದ್ದರು.
ರಂಜನಾ ಬೂಶೆಟ್ಟಿ ಮತ್ತು ಮಂಜುನಾಥ ವಚನ ಸಂಗೀತ ನಡೆಸಿಕೊಟ್ಟರು. ಜಯಶ್ರೀ ಬಿರಾದಾರ ಸ್ವಾಗತಿಸಿದರು. ಜಗದೇವಿ ಜವಳಗಿ ನಿರೂಪಣೆ ಮಾಡಿದರು. ವಚನ ಪಠಣ: ಇದಕ್ಕೂ ಮೊದಲ ೧೦೮ ವಚನಗಳನ್ನು ಸಂಗೀತದೊAದಿಗೆ ಸುಶ್ರಾವ್ಯವಾಗಿ ಸಾಮೂಹಿಕವಾಗಿ ಪಠಿಸಲಾಯಿತು.