ಅರಿವು ಕಾರ್ಯಕ್ರಮ ಯಶಸ್ವಿ

14UK3
Published on

ಉಳ್ಳಾಗಡ್ಡಿ-ಖಾನಾಪುರ: ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದು ಐಟಿಐ ಪಾಸಾದ ವಿದ್ಯಾರ್ಥಿಗಳು ಒಂದು ವರ್ಷದ ಇಂಟರ್ನ್‌ಶಿಪ್ ಪರೀಕ್ಷೆ ಎದುರಿಸಿ ಅರ್ಹತೆ ಪಡೆಯಬೇಕೆಂದು ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯಎಫ್.ಎಂ.ಹವಾಲ್ದಾರ್ ಹೇಳಿದರು.

ಹತ್ತರಗಿಯ ಆನಂದಪುರ ಗ್ರಾಮದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಯಮಕನಮರಡಿ ಹಾಗೂ ಹತ್ತರಗಿಯ ಮಲ್ಲಿಕಾರ್ಜುನ ಖಾಸಗಿ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಎಂಎನ್‌ಸಿ ಕಂಪನಿಗಳು ನಡೆಸುವ ಒಂದು ವರ್ಷದ ಪರೀಕ್ಷೆಗೆ ಸಹಾಯಧನ ಹಾಗೂ ಬಸ್ ಸೌಲಭ್ಯವಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.

ಸರ್ಕಾರಿ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ಸಿದ್ದು ರಾಮಗೊನಟ್ಟಿ, ಆನಂದ ಗದಾಡಿ, ಸಂತೋಷ ವಿಭೂತಿ, ಮಾಜಿ ಗ್ರಾಪಂ ಸದಸ್ಯ ವಿನಾಯಕ ಹಳ್ಳಿ, ಮಲ್ಲಿಕಾರ್ಜುನ ತರಬೇತಿ ಕೇಂದ್ರದ ಕಾರ್ಯದರ್ಶಿ ಪ್ರಭು ಖೋತ, ಪ್ರಸಾದ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net