

ಕಲಬುರಗಿ: ಆರೋಗ್ಯಕರ ಸಮಾಜಕ್ಕೆ ಭಾಷೆ ಮತ್ತು ಲಿಂಗಗಳ ಕುರಿತ ಸಂವೇದನಾ ಕಾರ್ಯಕ್ರಮಗಳ ಅವಶ್ಯವಿದೆ ಎಂದು ಪುಣೆಯ ಇಂಗ್ಲಿಷ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ö್ಡ ಸ್ಟಡೀಸ್ ಸಂಸ್ಥಾಪಕ ನಿರ್ದೇಶಕ ಪ್ರೊ.ಅಶೋಕ ಥೋರಟ್ ಹೇಳಿದರು.
ಸಿಯುಕೆಯ ಭಾಷಾಶಾಸ್ತç ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಾತೃಭಾಷಾ ದಿನಾಚರಣೆಯಲ್ಲಿ ಮಾತನಾಡಿ, ಪ್ರಸಕ್ತ ವರ್ಷ ಮಾತೃ ಭಾಷಾ ದಿನವನ್ನು ಭಾಷಾ ವೈವಿಧ್ಯತೆ ಮಹತ್ವ, ಬಹುಭಾಷಾ ಶಿಕ್ಷಣ ಮತ್ತು ಸ್ಥಳೀಯ ಭಾಷೆಗಳ ಸಂರಕ್ಷಣೆ ಆಗಿದೆ. ಬಹುಭಾಷೆಯೂ ಅರಿವಿನ ಕೌಶಲ ಹೆಚ್ಚಿದುತ್ತದೆ. ಸಾಂಸ್ಕೃತಿಕ ವೈವಿಧ್ಯತೆ ಬಲಪಡಿಸುತ್ತದೆ. ಜಾಗತಿಕ ನಾಗರಿಕರನ್ನು ರೂಪಿಸುತ್ತದೆ ಎಂದರು.
ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಸಾಮಾಜಿಕ ಸಾಮರಸ್ಯ ಬೆಳೆಸುವಲ್ಲಿ, ಸಾಂಸ್ಕೃತಿಕ ಅಸ್ಮಿತೆ ಉಳಿಸುವಲ್ಲಿ ಮತ್ತು ಪರಿಸರ ವಿವೇಕ ಕಾಪಾಡುವಲ್ಲಿ ಭಾಷೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಭಾಷೆಯು ಗಡಿಗಳನ್ನು ಮೀರಿ ಜನರನ್ನು ಒಂದುಗೂಡಿಸುತ್ತದೆ. ಅವರ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಸಂಬAಧಗಳನ್ನು ಬಲಪಡಿಸುತ್ತದೆ ಎಂದು ಹೆಳಿದರು.
ಪ್ರೊ.ಸುನೀತಾ ಮಂಜನಬೈಲ್, ಪ್ರೊ.ಭೀಮರಾವ ಭೋಸ್ಲೆ, ಪ್ರೊ.ಬಸವರಾಜ ಡೋಣೂರು, ಪ್ರೊ.ಸಂದೀಪ್ ರಣಬೀರಕರ್, ಡಾ.ಶಿವಗಂಗಾ ರುಮ್ಮಾ ಮಾತನಾಡಿದರು. ಡಾ.ಮಂಜುಲಕ್ಷಿö್ಮÃ ಎಲ್.ಪ್ರಾಸ್ತಾವಿಕ ಮಾತನಾಡಿದರು. ಡಾ.ಅಂಕಿತಾ ಶತಪತಿ ಸ್ವಾಗತಿಸಿದರು. ಡಾ.ಜಯದೇವಿ ಜಂಗಮಶೆಟ್ಟಿ, ಡಾ.ಸ್ವಪ್ನಿಲ್ ಚಾಪೇಕರ್ ಗೀತೆ ಹಾಡಿದರು. ಡಾ.ಆಂಜನೇಯುಲು ವಂದಿಸಿದರು.