ಅರಸು ಸಾಮಾಜಿಕ ನ್ಯಾಯದ ಹರಿಕಾರರು

CTD 21 BUDDA--01
Published on

ಚಿತ್ರದುರ್ಗ: ಹಸಿವು,ಅವಮಾನ,ಬಡತನವನ್ನು ಮೆಟ್ಟಿ ನಿಲ್ಲುವಂತಹ ಹಾಗೂ ಎಲ್ಲ ವರ್ಗದ ಜನರಿಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅ ರಸು ಅವರು ಸಾಮಾಜಿಕ ನ್ಯಾಯ ಒದಗಿಸಿದ ಹರಿಕಾರರೆಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿ ದರು.
ನಗರದ ಕೋಟೆ ನಾಡು ಬುದ್ದ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ದೇವರಾಜ ಅರಸರ ಜನ್ಮ ದಿನಾಚರಣೆಯಲ್ಲಿ ಮಾತ ನಾ ಡಿದ ಅವರು,ಅರಸು ಅವರು ಹಿಂದುಳಿದ ವರ್ಗಗಳಿಗೆ ನೀಡಿದ ವಿವಿಧ ಸೌಲಭ್ಯಗಳ ಅವಕಾಶಗಳನ್ನು ಬಳಸಿಕೊಂಡು ಸಮಾನತೆಯ ಪ್ರ ಬುದ್ಧ ಭಾರತವನ್ನು ನಿರ್ಮಿಸಬೇಕಿದೆ. ಸಮಸ್ಯೆಗಳ ವಿರುದ್ಧ ಶೋಷಿತ ಹಾಗೂ ಹಿಂದುಳಿದ ವರ್ಗಗಳು ಸಂಘಟಿತವಾಗಿ ಹೋರಾಟ ನಡೆ ಸಬೇಕಿದೆ ಎಂದರು.
ಪರಿಷತ್ ಕಾರ‌್ಯದರ್ಶಿ ಜಿ.ಶಾಂತಮ್ಮ ತಿಪ್ಪೇಸ್ವಾಮಿ,ಪ್ರಾಚಾರ‌್ಯೆ ಸಿದ್ದಲಿಂಗಮ್ಮ ಮಾತನಾಡಿದರು. ಬಿಎಸ್‌ಐ ಜಿಲ್ಲಾ ಕಾರ‌್ಯದರ್ಶಿ ಶಕುಂತಲ ಮ್ಮ,ಬೆಸ್ಕಾಂ ತಿಪ್ಪೇಸ್ವಾಮಿ,ವಕೀಲ ಚಂದ್ರಪ್ಪ,ಉಪಾನ್ಯಾಸಕ ಮಂಜು,ದುರ್ಗೇಶಪ್ಪ,ಇಂದೂಧರ್,ಗೌತಮ್,ರಮೇಶ್ ಮತ್ತಿತರರು ಇದ್ದ ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net