ಅರಸು ಕೊಡುಗೆಗಳೂ ಇಂದಿಗೂ ಜೀವಂತ

PHOTO-10000
Published on

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕೊಡುಗೆಗಳು ಇಂದಿಗೂ ಜೀವಂತವಾಗಿವೆ ಎಂದು ಲೇಖಕ ಎಚ್.ಆನಂದ ಕು ಾರ್ ಹೇಳಿದರು. ಅಹಿಂದ ಸಬಲೀಕರಣ ಸೌಹಾರ್ದ ಸಹಕಾರದಿಂದ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಅರಸು ಅವರ ಜಯಂತಿಯಲ್ಲಿ ಮಾತನಾಡಿದ ಅವರು,ಸಮಾಜದ ಕಟ್ಟ ಕಡೆಯವನಿಗೂ ಸಮಾನತೆ,ಮೂಲ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಅರಸು ಅವರು ಶೋಷಿತರು,ಹಿಂ ದುಳಿದವರು,ದಲಿತರು,ಅಲ್ಪಸಂಖ್ಯಾತರು,ಕಟ್ಟಕಡೆಯ ವ್ಯಕ್ತಿ ಕಡೆ ಸದಾ ಗಮನ ಕೊಡುತ್ತಿದ್ದರು. ಉಳುವವನೆ ಭೂ ಒಡೆಯ ಕಾಯ್ದೆ ಮೂಲಕ ಭೂ ಒಡೆತನದ ಹಕ್ಕು ನೀಡಿದ್ದಾರೆ. ಬಸವಲಿಂಗಪ್ಪ,ಅರಸು ದಿಟ್ಟ ರಾಜಕಾರಣಿಗಳು. ಡಾ.ಬಾಬು ಜಗಜೀವನರಾಂ, ಕಾನ್ಷಿರಾಂ ಅವರ ಸಾಲಿನಲ್ಲಿ ಅರಸು ನಿಲ್ಲುತ್ತಾರೆ. ಮನುವಾದದ ವಿರುದ್ಧದ ತಮ್ಮ ನಿಲುವನ್ನು 2ನೇ ದೇವರಾಜಅರಸು ಎಂದು ಕರೆಸಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರು ಎಂದಿಗೂ ಬಿಟ್ಟುಕೊಡಬಾರದು ಎಂದರು.
ದಲಿತ ಮುಖಂಡ ಬಿ.ರಾಜಣ್ಣ ಮಾತನಾಡಿ,ಅಂಬೇಡ್ಕರ್ ಅವರು ಎಲ್ಲ ಜಾತಿ,ಧರ್ಮದವರಿಗೂ ಸಮಾನತೆ ನೀಡಿದ್ದಾರೆ. ಆದರೆ ದಲಿತರು ಇನ್ನು ಅಸ್ಪಶ್ಯತೆಯಿಂದ ಹೊರಬರಲು ಆಗುತ್ತಿಲ್ಲವೆಂದು ವಿಷಾದಿಸಿದರು. ಅಹಿಂದ ಚಳವಳಿ ಮತ್ತು ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಕೆಂಚಪ್ಪ, ಸಹ ಸಂಚಾಲಕ ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ,ಪ್ರದೀಪ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net