ಅರಸೀಕೆರೆ ನಗರಸಭೆ ಜೆಡಿಎಸ್ ಸದಸ್ಯ ಈಶ್ವರಪ್ಪ ರಾಜೀನಾಮೆ

ಅರಸೀಕೆರೆ ನಗರಸಭೆ ಜೆಡಿಎಸ್ ಸದಸ್ಯ ಈಶ್ವರಪ್ಪ ರಾಜೀನಾಮೆ
Published on

ಹಾಸನ: ಅರಸೀಕೆರೆ ಜೆಡಿಎಸ್ ಮುಖಂಡರು ಹಾಗೂ ಎನ್.ಆರ್.ಸಂತೋಷ್ ಹಾಗೂ ಸ್ಥಳೀಯ ಮುಖಂಡರ ಅವರ ವರ್ತನೆಯಿಂದ ಬೇಸರಗೊಂಡು ನಗರಸಭೆ 10ನೇ ವಾರ್ಡಿನ ಕಾಳನಕೊಪ್ಪಲು ಸದಸ್ಯ ಕೆ.ಎಂ. ಈಶ್ವರಪ್ಪ ಗುರುವಾರ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
ಅರಸೀಕೆರೆಯಿಂದ ಆಗಮಿಸಿಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಸಿ. ಸತ್ಯಭಾಮಾ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಈಶ್ವರಪ್ಪ, ನಾನು 10ನೇ ವಾರ್ಡ್‌ನ ನಗರಸಭೆ ಸದಸ್ಯರಾಗಿರುವ ನಾನು, 2018 ರಿಂದ 2024ರ ವರೆಗೂ ಪ್ರಾಮಾಣಿಕವಾಗಿ ಜೆಡಿಎಸ್ ಪಕ್ಷದಲ್ಲಿದ್ದು ಕೆಲಸ ಮಾಡಿದ್ದೇನೆ.ಈ ಹಿಂದೆ 7 ಮಂದಿ ಜೆಡಿಎಸ್ ಸದಸ್ಯರು ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅನರ್ಹಗೊಂಡರೂ, ಆಗಲೂ ನಾನು ಪಕ್ಷ ನಿಷ್ಠನಾಗಿದ್ದೆ. ಶಾಸಕ ಶಿವಲಿಂಗೇಗೌಡರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋದರೂ
ನಾನು ಪಕ್ಷದಲ್ಲಿಯೇ ಇದ್ದೆ. ಆದರೂ ಅರಸೀಕೆರೆ ಜೆಡಿಎಸ್ ಮುಖಂಡರಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ. ಇದರಿಂದ ಮನನೊಂದು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದರು.
ಜೆಡಿಎಸ್ ಮುಖಂಡರು ಮಾಡಿದ ಬೇಸರದಿಂದ ನಗರಸಭೆಯ ನನ್ನ ಸದಸ್ವತ್ವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಇಲ್ಲಿ ಜಾತಿ ವ್ಯವಸ್ಥೆ ಇದ್ದು, ನಾವು ಹಿಂದೂ ಕುರುಬ ಜನಾಂಗದವರಾಗಿದ್ದು, ಜ್ಯೋತಿ ಗಂಗಾಧರ್ ಇದ್ದು, ಅವರ ಜಾತಿಯವರಿಗೆ ಮೀಸಲು ಕೊಟ್ಟರು. ಎನ್.ಆರ್. ಸಂತೋಷ್ ಅವರು ಕಳೆದ ಬಾರಿಯೇ ಹೇಳಿದ್ದರೂ ಅವರ ಜೊತೆಯಲ್ಲಿಯೇ ಇದ್ದೆವು ಎಂದರು. ಮುಸ್ಲಿಂ ಮತ್ತು ಕುರುಬ ಮತಗಳು ನನಗೆ ಬೇಡ ಎಂದು ಹೇಳಿದ್ದರು. ಆದರೆ ಪಕ್ಷಕ್ಕೋಸ್ಕರ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಇದ್ದು, ಇಷ್ಟೆಲ್ಲಾ ಬೆಳವಣಿಗೆ ಆದರೂ ಅಲ್ಲಿ ಉಸಿರುಕಟ್ಟಿದ ವಾತಾವರಣ ಇತ್ತು. ಇದರಿಂದ ಬೇಜಾರಾಗಿ ಪಕ್ಷದಿಂದಲೇ ಹೊರ ಬಂದಿದ್ದೇನೆ. ಹಿಂದೆ ನಗರಸಭೆ ಅಧ್ಯಕ್ಷ ಸ್ಥಾನ ಕೇಳಿದಾಗ ಭರವಸೆ ನೀಡಿ, ಬೆಳಗ್ಗೆ ಜ್ಯೋತಿ ಗಂಗಾಧರ್ ಮತ್ತು ಎನ್.ಆರ್. ಸಂತೋಷ್ ಅವರು ಮಾತು ಬದಲಾಯಿಸಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net