ಅರಶಿಣಗೇರಿ ಕೆರೆ ಒಡ್ಡು ಒಡೆದು ಬೆಳೆ ನಾಶ

8mnd4-
Published on

ಮುಂಡಗೋಡ: ತಾಲೂಕಿನ ಅರಶಿಣಗೇರಿ ಗ್ರಾಮದ ಕೆರೆಯ ಒಡ್ಡು ಒಡೆದು ಅಪಾರ ಪ್ರಮಾಣದ ನೀರು ಹರಿದು ಬೆಳೆಗಳು ನಾಶವಾದ ಘಟನೆ ಜರುಗಿದೆ.ಭಾನುವಾರ ರಾತ್ರಿ ಕೆರೆಯ ಒಡ್ಡು ಒಡೆದಿದೆ. ಇದರಿಂದ ಕೆರೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಕೆರೆಯ ಕೆಳಭಾಗದ ಗದ್ದೆಗಳಿಗೆ ನುಗ್ಗಿದ ಪರಿಣಾಮ ಬೆಳೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಮತ್ತೆ ಕೆಲ ಗದ್ದೆಗಳಿಗೆ ನೀರಿನ ಜತೆಗೆ ಮಣ್ಣು ಸಹ ಹರಿದು ಬಂದು ಬೆಳೆಗಳ ಮೇಲೆ ಬಿದ್ದು ಹಾನಿ ಉಂಟಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕಂದಾಯ ಹಾಗೂ ನೀರಾವರಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net