ಅರಳಿದ ಕಮಲ,ಮೊದಲಬಾರಿಗೆ ಪಾರ್ಲಿಮೆಂಟ್‌ಗೆ ಕಾರಜೋಳ

CTD MP--0001
Published on

ಚಿತ್ರದುರ್ಗ:ಚಿತ್ರದುರ್ಗ ಲೋಕಸಭಾ ಎಸ್ ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಗೋವಿಂದ ಕಾರಜೋಳ ಅವರು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯಿಂದ ಕೊನೆಗಳಿಗೆಯಲ್ಲೂ ಟಿಕೆಟ್ ಘೋಷಣೆ ಆದರೂ ಕಾರಜೋಳ ಅವರು ಅಂತಿಮ ವಾಗಿ 48121ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದರು.
ಗೆದ್ದಿರುವ ಕಾರಜೋಳ ಅವರು 6,84,890 ಮತಗಳನ್ನು ಗಳಿಸಿದರೆ ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್ಸಿನ ಬಿ.ಎನ್.ಚಂದ್ರಪ್ಪ ಅವರು 636769 ಮತಗಳನ್ನು ಪಡೆದಿದ್ದಾರೆ.
ಬಿಎಸ್‌ಪಿ ಮತ್ತಿತರ ಪಕ್ಷಗಳು ಹಾಗೂ ಪಕ್ಷೇತರರ ಸಹಿತ ಕಣದಲ್ಲಿ ಒಟ್ಟು 20 ಅಭ್ಯರ್ಥಿಗಳಿದ್ದರು. ಎಣಿಕೆ ಆರಂಭವಾದ ಮೊದಲ ಸುತ್ತಿನ 75 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಗೊಂಡಿದ್ದ ಚಂದ್ರಪ್ಪ ನಂತರ ಎಲ್ಲ ಸುತ್ತುಗಳಲ್ಲೂ ಹಿನ್ನೆಡೆ ಅನುಭವಿಸಿದರು. ಒಂದು ಹಂತದಲ್ಲಿ 42 ಸಾವಿರಕ್ಕೂ ಅಧಿಕ ಮುನ್ನಡೆ ಕಂಡಿದ್ದ ಕಾರಜೋಳ ಅವರ ಹಾಗೂ ಚಂದ್ರಪ್ಪ ಅವರ ನಡುವಿನ ಮತಗಳ ಅಂತರದಲ್ಲಿ ಏರಿಳಿತ ಕಂಡು ಬಂದರೂ ಕೂಡ,ಕಾರಜೋಳರ ಮುನ್ನಡೆಗೆ ಎಲ್ಲೂ ಧಕ್ಕೆ ಆಗಲಿಲ್ಲ.
ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರಿಂದ ಪ್ರಮಾಣಪತ್ರ ಸ್ವೀಕರಿಸಿ ಮಾತನಾಡಿದ ಕಾರಜೋಳ ಅವರ ಗೆಲುವಿನ ವರೆಗೆ ರಾಜಕಾರಣ,ಇನ್ನು ಮುಂದೆ ಇಲ್ಲ,ಕ್ಷೇತ್ರದ ನೀರಾವರಿ,ಕುಡಿವ ನೀರು,ರೈಲು ಮಾರ್ಗ ಕಾಮಗಾರಿಗಳಿಗೆ ಒತ್ತು ಕೊಡುವುದಾಗಿ ಹೇಳಿ ದರು.
ಗೆಲುವಿಗೆ ಸಹಕರಿಸಿದ ಜೆಡಿಎಸ್-ಬಿಜೆಪಿ ಕಾರ‌್ಯಕರ್ತರು,ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು. ಶಿಸ್ತಿನ ಸಿಪಾಯಿಯಾಗಿ ಹೈಕ ಮಾಂಡ್ ಅಣತಿ ಮೀರದೆ ಕಣಕ್ಕೆ ಧುಮುಕಿದ ಮಾಜಿ ಡಿಸಿಎಂ ಕಾರಜೋಳ ಅವರು,ಪಕ್ಷದ ಹಿರಿಯರ ಮಾತು ಪಾಲಿಸಿದ್ದರಿಂದಾಗಿ ಮೊ ದಲ ಬಾರಿಗೆ ಚಿತ್ರದುರ್ಗದ ಮೂಲಕ ಸಂಸತ್‌ನ್ನು ಪ್ರವೇಶಿಸುತ್ತಿದ್ದಾರೆ.
ಬೆಳಗ್ಗೆ 7.30ಕ್ಕೆ ಎಣಿಕೆ ಕೇಂದ್ರದಲ್ಲಿದ್ದ ಭದ್ರತಾಕೊಠಡಿಗಳನ್ನು ತೆರೆಯಲಾಯಿತು. 21 ಕೊಠಡಿಗಳ ಪೈಕಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕೊಠಡಿ ಬೀಗ ಬಿಟ್ಟು ಬಂದಿದ್ದರಿಂದಾಗಿ ಒಪನ್ ಮಾಡುವುದು ವಿಳಂಬವಾಯಿತು. ನಂತರದಲ್ಲಿ ಇದೇ ಕ್ಷೇತ್ರದ 2 ಸಿಯು ಗಳು ಕೈಕೊಟ್ಟಿದ್ದರಿಂದಾಗಿ ವಿವಿ ಪ್ಯಾಟ್‌ಗಳಲ್ಲಿದ್ದ ಸ್ಲಿಪ್ ಎಣಿಸಬೇಕಾಗಿದ್ದರಿಂದ ಅಂತಿಮವಾಗಿ ಫಲಿತಾಂಶ ಘೋಷಣೆ ಕೂಡ ವಿಳಂಬವಾಯಿತು.
ಮತ ಎಣಿಕೆ ಆರಂಭವಾಗುತ್ತಿದ್ದಂತೆ ಪುತ್ರ ಉತ್ಸವನೊಂದಿಗೆ ಆಗಮಿಸಿದ್ದ ಕಾಂಗ್ರೆಸ್ಸಿನ ಚಂದ್ರಪ್ಪ ಅವರು,ಗೆಲುವಿನೆಡೆ ಅತ್ಯಂತ ಆತ್ಮ ವಿಶ್ವಾಸದಿಂದ ಇದ್ದರು. ಆದರೆ ಮುನ್ನಡೆ ಯಾವಾಗ ಕಾರಜೋಳ ಪಾಲಾಯಿತೋ ಆಗ ಕೇಂದ್ರದಿಂದ ನಿರ್ಗಮಿಸಿದರು. ಗೆಲುವು ನಿಚ್ಚಳ ಎಂದು ಗೊತ್ತಾದ ಬಳಿಕ ಕಾರಜೋಳ ಅವರು ಪುತ್ರ ಉಮೇಶ್ ಕಾರಜೋಳ,ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ಮತ್ತಿತರರೊಂದಿಗೆ ಕೇಂದ್ರಕ್ಕೆ ಆಗಮಿಸಿದರು. ಗೆಲುವಿನ ಸುದ್ದಿ ಹರಡುತ್ತಿದ್ದಂತೆ ಬಿಜೆಪಿ ಶಾಸಕರು ಪಟಾಕಿ ಸಿಡಿಸಿ,ಬಣ್ಣ ಎರಚಿ ಸಂಭ್ರಮಿಸಿದರು. ಮತ ಎಣಿಕೆ ಆರಂಭಕ್ಕೂ ಮೊದಲು ಕಾರಜೋಳ ಅವರು ನಗರದ ಜೆಸಿಆರ್ ಬಡಾವಣೆ ವಿನಾಯಕ ದೇವಾಲಯ ದಲ್ಲಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net