

ಅರಳಗುಂಡಗಿ (ಯಡ್ರಾಮಿ): ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೇರಟಗಿಯ ಅಕ್ಕಮಹಾದೇವಿ ಭಜನಾ ಸಂಘದಿAದ ಶನಿವಾರ ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಸಂತೋಷ ಪಾಟೀಲ್ ತಿಳಿಸಿದ್ದಾರೆ.
ಶ್ರೀ ಬಲವಂತ ಶರಣರು ಸಾನ್ನಿಧ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೌರಮ್ಮಗೌಡ್ತಿ ಜೋತೆಪ್ಪಗೋಳ ಅಧ್ಯP್ಷÀತೆ ವಹಿಸುವರು. ಮುಖಂಡರಾದ ಬಸವರಾಜಗೌಡ ಮಾಲಿಪಾಟೀಲ್, ಶರಣಗೌಡ ಹಿರೇಗೌಡರ್, ರೇವಣಸಿದ್ದಪ್ಪಗೌಡ ಕಮಾನಮನಿ, ಬಸವಂತರಾಯ ಜೋತೆಪ್ಪಗೋಳ, ಬಲವಂತರಾಯ ಬಿರಾದಾರ, ಶಿವನಗೌಡ ಪೊಲೀಸ್ ಪಾಟೀಲ್, ಗಿರಿಜಾಶಂಕರ ರಾಮನಗೋಳ, ಮಾಂತು ಶ್ರೀಗಿರಿ, ಭೀಮರಾಯ ಇಸಂಪುರ ಇತರರು ಪಾಲ್ಗೊಳ್ಳುವರು. ಭೀಮರಾಯ ಕಟ್ಟಿಮನಿ, ಶಿವಯ್ಯ ಮಠಪತಿ, ಮಲ್ಲಿಕಾರ್ಜುನ ವಿಭೂತಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.