

ಅರಳಗುಂಡಗಿ: ಕಲಬುರಗಿ ತಾಲೂಕಿನ ಸಿರನೂರಿನ ಮಾತಾಶ್ರೀ ಸಂಗಮ ಪಾಟೀಲ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಭಜನೆ ಸ್ಪರ್ಧೆಯಲ್ಲಿ ಗ್ರಾಮದ ಶ್ರೀ ಶರಣಬಸವೇಶ್ವರ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವ-7 ನಿಮಿತ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ 11 ಮಂಡಳಿಗಳು ಭಾಗವಹಿಸಿದ್ದವು. ಅರಳಗುಂಡಗಿಯ ಶ್ರೀ ಶರಣಬಸವೇಶ್ವರ ಭಜನಾ ಮಂಡಳಿಯೂ ಏನಾಗ್ಯಾದ.. ಏನಾಗ್ಯದ.. ಹರ ನಿನ್ನ.. ಹಾಡನ್ನು ಪ್ರಸ್ತುತ ಪಡಿಸಿ ಪ್ರಥಮ ಸ್ಥಾನ ಪಡೆಯಿತು. ಇನ್ನುಳಿದಂತೆ ಕಾಳಗಿ ತಾಲೂಕಿನ ಕೇಶ್ವಾರದ ಶ್ರೀಶೈಲ ಮಲ್ಲಿಕಾರ್ಜುನ ಭಜನಾ ಮಂಡಳಿ (ದ್ವಿತೀಯ), ಸೇಡಂ ತಾಲೂಕಿನ ಬಿಬ್ಬಳ್ಳಿಯ ದೇವಿ ದೇವಮ್ಮ ಭಜನಾ ಮಂಡಳಿ (ತೃತೀಯ) ನಂತರದ ಸ್ಥಾನದಲ್ಲಿವೆ. ಕಲಬುರಗಿಯಲ್ಲಿ ಸೆ.22ರಂದು ವಿಭಾಗ ಮಟ್ಟದ ಸ್ಪರ್ಧೆಗಳು ನಡೆಯಲಿವೆ.
ಭಾರತ ವಿಕಾಸ ಸೇವಾ ಕಾರ್ಯದರ್ಶಿ ಡಾ.ಲಿಂಗರಾಜ ಅಪ್ಪ ಅವರು ತಂಡಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದರು. ಯಡ್ರಾಮಿ ತಾಲೂಕ ಸಂಯೋಜಕ ರಾಘವೇಂದ್ರ ಕುಲಕರ್ಣಿ, ಪ್ರಮುಖರಾದ ಬಸವರಾಜ ಪಾಟೀಲ್, ರುದ್ರಗೌಡ ಪಾಟೀಲ್, ಅರಳಗುಂಡಗಿಯ ಭಜನಾ ಮಂಡಳಿ ಅಧ್ಯP್ಷÀ ಸುರೇಶ ಗೊಬ್ಬರಡಗಿ, ಬಸವರಾಜ ಗೋಗಿ, ಮಲ್ಲಿನಾಥಗೌಡ ಮಾಲಿಪಾಟೀಲ್, ಮಾಂತಗೌಡ ಕಮಾನಮನಿ, ರೇವಣಸಿದ್ದಪ್ಪ ರಾಚನೂರ, ಬಸಯ್ಯ ಸ್ಥಾವರಮಠ, ನಬಿಲಾಲ್ ಜಕಾತಿ, ಗುರುಲಿಂಗಪ್ಪ ಘತ್ತರಗಿ, ಸೈಫನ್ ಖಾಜಿ ಇದ್ದರು.