ಅರಳಗುಂಡಗಿ ಅಭಿವೃದ್ಧಿಗೆ 25ಕೋಟಿ ರೂ. ಅನುದಾನ ನೀಡಿ

klb4
ಅರಳಗುಂಡಗಿ ಗ್ರಾಮದ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ನೀಡುವಂತೆ ಗ್ರಾಮದ ಪ್ರಮುಖರು ಬೆಂಗಳೂರಿನಲ್ಲಿ ಕೆಕೆಆರ್‍ಡಿಬಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್ ಅವರಿಗೆ ಮನವಿಪತ್ರ ಸಲ್ಲಿಸಿದರು. ನಿಂಗರಾಜ ಕಡಿ, ಶಿವಾನಂದ ಅವಂಟಿ, ಸಂತೋಷ ಘತ್ತರಗಿ, ರಾಚಯ್ಯ ಮುರುಗಾನೂರ ಇತರರಿದ್ದರು.
Published on

ಅರಳಗುಂಡಗಿ: ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ, ಬೀದಿ ದೀಪ ಸೇರಿ ಅಗತ್ಯ ಮೂಲಕ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಸೋಮವಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್ ಅವರಿಗೆ ಮನವಿಪತ್ರ ಸಲ್ಲಿಸಿ, ಅರಳಗುಂಡಗಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೂಲಕ ಸೌಕರ್ಯವಿಲ್ಲದೆ ಜನರು ಪರದಾಡುತ್ತಿದ್ದಾರೆ. ಹೀಗಾಗಿ ಕೂಡಲೇ 25 ಕೋಟಿ ರೂ. ಅನುದಾನ ನೀಡಿ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ನಿಂಗರಾಜ ಕಡಿ, ಸದಸ್ಯರಾದ ಶಿವಾನಂದ ಅವಂಟಿ, ಸಂತೋಷ ಘತ್ತರಗಿ, ರಾಚಯ್ಯ ಮುರುಗಾನೂರ, ಶಿವಶರಣಯ್ಯ ಗುರು, ಈರಣ್ಣಗೌಡ ಮಾಲಿಪಾಟೀಲ್, ಪ್ರಮುಖರಾದ ಸಿದ್ದರಾಮಪ್ಪ ದಾದಗೋಳ, ಬಸವರಾಜಗೌಡ ಮಾಲಿಪಾಟೀಲ್, ಪ್ರೇಮನಗೌಡ ಬಿರಾದಾರ, ರೇವಣಸಿದ್ದಪ್ಪಗೌಡ ಕಮಾನಮನಿ, ಗಿರಿಜಾಶಂಕರ ರಾಮನಗೋಳ, ಕರೆಪ್ಪಗೌಡ ಕಾಳಗಿ, ಶೇಖರ ಮಾಲಿಪಾಟೀಲ್, ಮುನೀರ ದೊಡ್ಡಮನಿ, ಮಡಿವಾಳಪ್ಪಗೌಡ ಮಾಲಿಪಾಟೀಲ್, ಅಶೋಕ ಮೇಲಾಕರ, ಮಾಳು ಪೂಜಾರಿ, ಅಮೃತ ಮಾಲಿಪಾಟೀಲï, ಶಿವಾನಂದ ಗೋಗಿ, ಕಾಶೀನಾಥ ಹಳಿಮನಿ, ದುರ್ಯೋಧನ ಮರಾಠಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net