ಅರಮನೆಯಲ್ಲಿ ಲೇಸರ್ ಷೋ ಆರಂಭ ಶೀಘ್ರ

web3
ಕಿತ್ತೂರು ವರ್ತಕ ಸಂಘದಿಂದ ಶಾಸಕ ಬಾಬಾಸಾಹೇಬ ಪಾಟೀಲ ಅವರನ್ನು ನ್ಯಾಯ ದೇವತೆಯ ವಿಗ್ರಹ ನೀಡಿ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಸಾಣಿಕೊಪ್ಪ, ಹನುಮಂತ ಲಂಗೋಟಿ, ಜಯಾನಂದ ಅರ್ಕಸಾಲಿ ಇತರರಿದ್ದರು.
Published on

ಚನ್ನಮ್ಮ ಕಿತ್ತೂರು: ಕಿತ್ತೂರಿಗೆ ಬರುವ ಪ್ರವಾಸಿಗರನ್ನು ಸೆಳೆಯುವಂತೆ ಮಾಡಲು ಅರಮನೆಯಲ್ಲಿ ವಾರದ ಎರಡು ದಿನ ಲೇಜರ್ ಷೋ ನಡೆಸುವಂತ ಯೋಜನೆ ರೂಪಿಸಿದ್ದು, ಇದು ಹೊಸ ಮಾದರಿಯ ವಿಭಿನ್ನ ಲೇಸರ್ ಶೋ ಆಗಲಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಿತ್ತೂರು ವರ್ತಕರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ರಾಣಿ ಚನ್ನಮ್ಮಾಜಿ ಇತಿಹಾಸ ಬಿತ್ತರಿಸುವಂತಹ ಕೆಲಸವಾಗಲಿದೆ. ಹೊಸ ಯೋಜನೆಗಳು ಸಿದ್ಧವಾದರೆ, ಮುಖ್ಯಮಂತ್ರಿಗಳಿಂದ ಮಂಜೂರಾತಿ ಪಡೆದು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಪ್ರತಿರೂಪದ ಕೋಟೆಗೆ ಹಿಂದಿನ ಶಾಸಕರು ಕೇವಲ ಪ್ರಸ್ತಾವನೆ ಅಷ್ಟೇ ಸಲ್ಲಿಸಿದ್ದಾರೆ. ಒಂದು ರೂಪಾಯಿ ಮೀಸಲಿಟ್ಟಿಲ್ಲ. ನಾನು ಮುಖ್ಯಮಂತ್ರಿಗಳಿಗೆ ಇದರ ಪ್ರಸ್ತಾವನೆ ಇಟ್ಟಿದ್ದೇನೆ. 80ರಷ್ಟು ಕೆಲಸ ಪೂರ್ಣವಾಗಿದೆ, ಇದನ್ನು ಪೂರ್ಣಗೊಳಿಸಲು ಸಮಯ ಬೇಕೆಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬರುವ ದಿನಗಳಲ್ಲಿ ಪೂರ್ಣಗೊಳಿಸುವ ಜವಾಬ್ದಾರಿ ನನ್ನದು ಎಂದು ಪಾಟೀಲ ಹೇಳಿದರು. ವರ್ತಕರ ಸಂಘದ ಉಪಾಧ್ಯಕ್ಷ ಹನುಮಂತ ಲಂಗೋಟಿ ಮಾತನಾಡಿ, ನಾಡಿನ ಅಭಿವದ್ಧಿಯಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದರು.

ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾಣಿಕೊಪ್ಪ ಮಾತನಾಡಿದರು. ಬಸವರಾಜ ಶೇಡೆಗಾಳಿ, ಜಯಾನಂದ ಅರ್ಕಸಾಲಿ, ಮಲ್ಲಿಕಾರ್ಜುನ ಸಾಣಿಕೊಪ್ಪ, ಸುರೇಶ ಜೋರಾಪೂರ, ಮಹೇಶ ಹೊಂಗಲ, ಗಿರೀಶ ಅರ್ಕಸಾಲಿ, ಸಂತೋಷ ಕಲಾಲ, ಶಿವಾನಂದ ಪತ್ತಾರ, ಸಚಿನ ಸಾಣಿಕೊಪ್ಪ, ಆನಂದ ಪತ್ತಾರ, ಪ್ರವೀಣ ಶೆಟ್ಟರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net