ಅರಮನೆಯಲ್ಲಿ ಯುಗಾದಿ ಸಂಗೀತೋತ್ಸವ

State 2 Mysore Palace
Published on

ಮೈಸೂರು: ಯುಗಾದಿ ಹಬ್ಬದ ಪ್ರಯುಕ್ತ ಅರಮನೆ ಮಂಡಳಿ ವತಿಯಿಂದ ಯುಗಾದಿ ಸಂಗೀತೋತ್ಸವ ಕಾರ್ಯಕ್ರಮವನ್ನು ಮಾ.22ರಿಂದ 24ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಅರಮನೆ ಅಂಗಳದಲ್ಲಿ 22ರಂದು ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಸಂಜೆ 5.30ಕ್ಕೆ ಯದುಕುಮಾರ್ ಮತ್ತು ತಂಡದಿಂದ ಮಂಗಳವಾದ್ಯ ಮತ್ತು ಸಾಕ್ಸ್‌ಫೋನ್ ವಾದನ, ಸಂಜೆ 6ಕ್ಕೆ ವೇದಬ್ರಹ್ಮ ಶ್ರೀಧರ್ ಶರ್ಮ ಮತ್ತು ಅರಮನೆ ಪುರೋಹಿತರಿಂದ ಪಂಚಾಂಗ ಶ್ರವಣ, ಸಂಜೆ 7.15ಕ್ಕೆ ಗಾಯಕರಾದ ರಘು ದೀಕ್ಷಿತ್ ತಂಡದವರಿಂದ ಸಂಗೀತ ಸಂಜೆ ನಡೆಯಲಿದೆ.


23ರ ಸಂಜೆ 6ಕ್ಕೆ ಕರ್ನಾಟಕ ಪೊಲೀಸ್ ಬ್ಯಾಂಡ್, ಸಂಜೆ 7ಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಂದ ನೈಟ್ಸ್ ಕಾರ್ಯಕ್ರಮ ಜರುಗಲಿದೆ. 24ರ ಸಂಜೆ 6ಕ್ಕೆ ಆಂಗ್ಲ ಪೊಲೀಸ್ ಬ್ಯಾಂಡ್ ಹಾಗೂ 7ಕ್ಕೆ ಗಾಯಕ ವಾಸುಕಿ ವೈಭವ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮವಿದೆ.


ಮಾ. 22ರಿಂದ 24ರ ವರೆಗೆ ನಿತ್ಯ ಸಂಜೆ 7ರಿಂದ ರಾತ್ರಿ 9.30ರವರೆಗೆ ಅರಮನೆಗೆ ವಿದ್ಯುತ್ ದೀಪ ಅಲಂಕಾರವಿರುತ್ತದೆ ಎಂದು ಅರಮನೆ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net