

ಮೈಸೂರು: ಅರಬ್ ದೇಶದಲ್ಲಿ ಉದ್ಯೋಗ ಕೊಡಿಸುವ ಪತ್ರಿಕಾ ಜಾಹೀರಾತು ನಂಬಿದ ನಗರದ ದಂತ ವೈದ್ಯರೊಬ್ಬರು 12 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಕತಾರ್‌ನಲ್ಲಿ ಉದ್ಯೋಗ ಅವಕಾಶಗಳು ಇವೆ ಎಂಬ ಪತ್ರಿಕೆಯೊಂದರ ಜಾಹೀರಾತು ನಂಬಿ ಕರೆ ಮಾಡಿದ್ದ ನಜರ್‌ಬಾದ್‌ನ ದಂತ ವೈದ್ಯರನ್ನು ಮುಂಬೈನ ವಂಚಕರು ಹಂತ ಹಂತವಾಗಿ ಆನ್‌ಲೈನ್ ಮೂಲಕ ಹಣ ಪಡೆದು ಮೋಸ ಮಾಡಿದ್ದಾರೆ. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.