ಪಾವಗಡ: ದೇವಲಕೆರೆ ಗ್ರಾಮದ ಹೊರವಲಯದ ಬೆಟ್ಟದ ತಪ್ಪಲಿನಲ್ಲಿ ಮೇಕೆ ಮೇಯಿಸಲು ಹೋದ ವ್ಯಕ್ತಿಯನ್ನು ಕೊಲೆ ಮಾಡಿ 30 ಮೇಕೆಗಳನ್ನು ಕದ್ದೊಯ್ದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಕೆ. ಟಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ದೇವಲಕೆರೆ ಗ್ರಾಪಂ ಮಾಜಿ ಉಪಾಧ್ಯಕ್ಷ ನರ ಸಿಂಹಪ್ಪ(60) ಕೊಲೆಯಾದವ.
ಏನಿದು ಟನೆ: ಶುಕ್ರವಾರ ಮಧ್ಯಾಹ್ನ ಬೆಟ್ಟದಲ್ಲಿ ಮೇಕೆಗಳನ್ನು ಮೇಯಿಸಲು ಹೋಗಿದ್ದ ನರಸಿಂಹಪ್ಪನನ್ನು ಕರೆಯಮ್ಮನಪಾಳ್ಯದ ಮಣಿಕಂಠ (29) ಕುಡುಗೋಲಿನಿಂದ ಹತ್ಯೆಗೈದು, ಬಳಿಕ 30 ಮೇಕೆಗಳನ್ನು ಹೊಡೆದುಕೊಂಡು ಹೋಗಿದ್ದಾನೆ. ಸಂಜೆಯಾದರೂ ಮನೆಗೆ ಬಾರದ ಕಾರಣ ಕುಟುಂಬಸ್ಥರು ಅಕ್ಕಪಕ್ಕದ ಗ್ರಾಮಸ್ಥರನ್ನು ವಿಚಾರಿಸಿದಾಗ ವದನಕಲ್ಲು ಮಾರ್ಗವಾಗಿ ಮೇಕೆ ಹೊಡೆದುಕೊಂಡು ಹೋಗಿರುವ ವಿಚಾರ ತಿಳಿಯಲಿದೆ.ಈ ಮಾಹಿತಿ ಮೇರೆಗೆ ಶನಿವಾರ ಬೆಳಗ್ಗೆ ಹಿರಿಯೂರು ತಾಲೂಕಿನ ಕುರಿಸಂತೆಗೆ ತೆರಳಿದಾಗ, ಕುರಿಗಳನ್ನು ಮಾರಾಟ ಮಾಡುತ್ತಿದ್ದ ಮಣಿಕಂಠನನ್ನು ಹಿಡಿದು, ಅರಸೀಕೆರೆ ಪೊಲೀಸ್ ಸಿಬ್ಬಂದಿಗೆ ಒಪ್ಪಿಸಿದ್ದು, ವಿಚಾರಣೆ ವೇಳೆ ಆರೋಪಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಅರಸೀಕೆರೆ ಪೊಲೀಸರು ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮೃತ ದೇಹವನ್ನು ಪತ್ತೆಹಚ್ಚಿದ್ದಾರೆ. ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.