ಅರಣ್ಯ ಹಾಕಿ ರಾಜ್ಯ ತಂಡಕ್ಕೆ ಕೂಡಿಗೆಯಲ್ಲಿ ತರಬೇತಿ

05Kush01
Published on

ಕುಶಾಲನಗರ: ಅಖಿಲ ಭಾರತ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಹಮ್ಮಿಕೊಂಡಿರುವ ಹಾಕಿ ಕ್ರೀಡಾಕೂಟವು ಮಾರ್ಚ್ 10ರಂದು ಹರಿಯಾಣದ ಪನಚಕಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕೊಡಗಿನ ದರ್ಶನ ನಾಯಕತ್ವದಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಲಿದೆ.


ಒಟ್ಟು 14 ಜನ ಕರ್ನಾಟಕ ತಂಡದ ಆಟಗಾರರು ಪ್ರಸಕ್ತ ಕೂಡಿಗೆ ಕ್ರೀಡಾಶಾಲೆಯಲ್ಲಿರುವ ಹಾಕಿ ಟರ್ಫ್ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದು, ಕೂಡಿಗೆ ಕ್ರೀಡಾ ಶಾಲೆಯ ಹಾಕಿ ತರಬೇತುದಾರ ವೆಂಕಟೇಶ್ ತರಬೇತಿ ನೀಡುತ್ತಿದ್ದಾರೆ.


ತಂಡದಲ್ಲಿ ಕೊಡಗಿನವರಾದ ದರ್ಶನ್ (ನಾಯಕ), ಸನಚಿತ್ ಸೋಮಯ್ಯ, ಧಾರವಾಡದ ಮಿಥನ್ ಶ್ರೀನಿವಾಸ್, ಶಾಯದ್ ಬಾಷಾ, ನವೀನ್.ಎನ್., ಜಯವಂತ್, ರಘು, ವಿನೋದ ಕುಮಾರ್, ಮೈಸೂರಿನ ಎಚ್.ಬಿ.ಅನಿತ್ ರಾಜ್, ಹಾಸನದ ಹರೀಶ್ ಕುಮಾರ್, ಶಶಿಕಾಂತ್, ಚಿಕ್ಕಮಗಳೂರಿನ ಎಲ್.ಜಿ.ಚೇತನ್, ಗೋಲ್ ಕೀಪರ್ ಆಗಿ ಕೋಲಾರದ ಆರ್.ವಿನು ಇದ್ದಾರೆ.

05ಓ್ಠ01
ಅಖಿಲ ಭಾರತ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಹಮ್ಮಿಕೊಂಡಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕೊಡಗಿನ ದರ್ಶನ ನಾಯಕತ್ವದಲ್ಲಿ ಕರ್ನಾಟಕ ತಂಡದ ಆಟಗಾರರು.
=-=-=-=-=-=-=-=-=-=-=-=-=-=-=-=-=-=-=-=-=-=-=-=-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net