ಅರಣ್ಯ ಹಕ್ಕು ಸಮಿತಿ ಪುನರ್‌ ರಚಿಸಲು ಒತ್ತಾಯ

26 ckm 3 mariyappa
ಜಿಲ್ಲಾ ಕಾಂಗ್ರೆಸ್‌ನ ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಮರಿಯಪ್ಪ
Published on

ಚಿಕ್ಕಮಗಳೂರು: ಎಲ್ಲ ಬುಡಕಟ್ಟು ಜನರಿಗೆ ಕನಿಷ್ಟ ೫ ರಿಂದ ೧೦ ಎಕರೆವರೆಗಿನ ಜಮೀನಿಗೆ ಹಕ್ಕುಪತ್ರ ನೀಡಬೇಕು ಹಾಗೂ ಅರಣ್ಯ ಹಕ್ಕು ಸಮಿತಿಯನ್ನು ಪುನರ್ ರಚಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ನ ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಮರಿಯಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ಹಾಗೂ ಕಳಸ ತಾಲೂಕುಗಳಲ್ಲಿ ಬಹಳ ವರ್ಷಗಳಿಂದ ಪರಿಶಿಷ್ಟ ಪಂಗಡದ ಗೌಡಲು ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕುದುರೆಮುಖ ರಾಷ್ಟಿçÃಯ ಉದ್ಯಾನ, ಡೀಮ್ಡ್ ಫಾರೆಸ್ಟ್, ೪(೧) ಪ್ರಾಸ್ತವಿತ ಅರಣ್ಯ ಘೋಷಣೆ ಮಾಡಿರುವುದರಿಂದ ಕಿರು ಅರಣ್ಯ ಉತ್ಪನ್ನ ಮಾಡಲು ಮತ್ತು ಜಮೀನಿನ ಕೃಷಿ ಮಾಡಿ ಜೀವನ ಸಾಗಿಸಲು ಬಹಳ ತೊಂದರೆಯಾಗಿದೆ ಎಂದು ದೂರಿದರು.

ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಬುಡಕಟ್ಟು ಕುಟುಂಬಗಳಿಗೆ ತಲಾ ೪ ಎಕರೆ ೩೮ ಗುಂಟೆ ಜಮೀನು ಮುಫತ್ತಾಗಿ ಕೊಡಬೇಕೆಂದು ಆಗಿನ ಕಂದಾಯ ಸಚಿವ ಬಸವಲಿಂಗಪ್ಪ ಅವರು ಒಂದಷ್ಟು ಜನರಿಗೆ ಹಕ್ಕು ಪತ್ರ ನೀಡಿದ್ದರು. ಅದರಲ್ಲಿ ಬುಡಕಟ್ಟು ನಿವಾಸಿಗರು ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಪಕ್ಕಾಪೋಡಿಯಾಗಿ ದುರಸ್ತಿ ಮಾಡಿಕೊಟ್ಟಿಲ್ಲ. ಈಗ ಪೋಡಿ ಮಾಡಿಸಲು ಹೋದರೆ ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯಿರಿ ಎನ್ನುತ್ತಾರೆ. ಆದರೆ ಅರಣ್ಯ ಇಲಾಖೆಯವರು ಅರಣ್ಯದ ಕಾರಣಕ್ಕಾಗಿ ತಮ್ಮ ಅಭಿಪ್ರಾಯ ನೀಡುತ್ತಿಲ್ಲ ಎಂದರು.

ಜಿಲ್ಲೆಯಲ್ಲಿ ೧೨ ವಾಲ್ಮೀಕಿ ಆಶ್ರಮ ಶಾಲೆಗಳಿದ್ದು, ಇಲ್ಲಿಗೆ ಖಾಯಂ ಶಿಕ್ಷಕರು, ಅಡುಗೆಯವರು ಹಾಗೂ ರಾತ್ರಿ ಪಾಳಿಯಲ್ಲಿ ಕಾವಲುಗಾರರನ್ನು ನೇಮಕ ಮಾಡಬೇಕು. ಇದರ ಜತೆಗೆ ಈ ಶಾಲೆಗಳನ್ನು ೫ ರಿಂದ ೧೦ನೇ ತರಗತಿಯವರೆಗೆ ಮೇಲ್ದರ್ಜೆಗೇರಿಸಿ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಕಿರು ಅರಣ್ಯ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ಹಾಗೂ ಬೆಂಬಲ ಬೆಲೆಯನ್ನು ನೀಡಬೇಕು. ಶೃಂಗೇರಿ ತಾಲೂಕಿನ ಕೆಮಸಿಗೆ ಗ್ರಾಮದ ತಾರೊಳ್ಳಿ ಕೊಡಿಗೆ ಗಿರಿಜನ ಕಾಲನಿ ರಸ್ತೆ ಹಾಗೂ ಬುಕ್ಕಡಿಬೈಲು, ಅಡಿಕೇಸು, ಮುಂಡಗಾರು ರಸ್ತೆ, ಹೊಳಲೆ, ಮಾವಿನಕೋಡು ಆವಿಗೆ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಬೇಕು. ಶೀರಲು ಗ್ರಾಮದ ಕೆಳಗಿನ ಶೀರಲು ಮತ್ತು ಮೇಲಿನ ಶೀರಲು ಗಿರಿಜನ ಕಾಲನಿಗೆ ಸೇತುವೆ ನಿರ್ಮಾಣ ಮಾಡಿ ಇಲ್ಲಿನ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

ಶೃಂಗೇರಿ ತಾಲೂಕಿನ ಕಚಿಗೆ ಮತ್ತು ಮುಂಡೋಡಿ ಗಿರಿಜನ ಕಾಲನಿ, ಕೊಪ್ಪ ತಾಲೂಕಿನ ಹರಳಾನೆ ಗ್ರಾಮದ ಮಾದಲಬೈಲು ಗಿರಿಜನ ಕಾಲನಿಗೆ ವಿದ್ಯುತ್ ಸೌಲಭ್ಯ ಒದಗಿಸಬೇಕು. ರಾಷ್ಟಿçÃಯ ಉದ್ಯಾನವನದಿಂದ ಸ್ವಇಚ್ಚೆಯಿಂದ ಹೋಗುವುದನ್ನು ಹೊರತುಪಡಿಸಿ ಸರ್ಕಾರ ಹೊರ ಹಾಕುವುದಾದರೆ ಹೊರ ಹಾಕುವ ಆದೇಶವನ್ನು ಹೊರಡಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net