ಅರಣ್ಯ ರಕ್ಷಣೆಯಲ್ಲಿ ಸಂಘಗಳೂ ಕೈ ಜೋಡಿಸಲಿ

IMG-20220731-WA0032.jpg
Published on

ದಾವಣಗೆರೆ: ಗಿಡಗಳ ಪಾಲನೆ, ಸಂರಕ್ಷಣೆ ಮಾಡುವುದು ಕೇವಲ ಅರಣ್ಯ ಇಲಾಖೆ ಕೆಲಸವಲ್ಲ. ಸಾರ್ವಜನಿಕರು, ಸಂಘ-ಸಂಸ್ಥೆಗಳೂ ಕೈ ಜೋಡಿಸಿದಾಗ ಉತ್ತಮ ಪರಿಸರ ನಿರ್ಮಿಸಬಹುದು ಎಂದು ಯುಬಿಡಿಟಿ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಎಸ್. ಹೊಳಿ ಹೇಳಿದರು.

ರೋಟರಿ ಸಂಸ್ಥೆ ಹಾಗೂ ಇನ್ನರ್‌ವ್ಹೀಲ್ ಸಂಸ್ಥೆ ದಾವಣಗೆರೆ ವಿದ್ಯಾನಗರ ಹಾಗೂ ದಾವಣಗೆರೆ ಮಿಡ್‌ಟೌನ್, ಪ್ರಾದೇಶಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಯುಬಿಡಿಟಿ ಕಾಲೇಜಿನ ಮಹಿಳಾ ವಸತಿ ನಿಲಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕೆ. ದೇವರಾಜ್, ನಿವೃತ್ತ ಡಿಎಫ್‌ಒ ಎಸ್.ಎನ್.ಮಳವಳ್ಳಿ, ರೋಟರಿ ದಾವಣಗೆರೆ ವಲಯದ ಉಪ ಪ್ರಾಂತಪಾಲಕ ಎನ್.ಬಿ.ಮೃತ್ಯುಂಜಯಪ್ಪ, ರೋಟರಿ ಸಂಸ್ಥೆ ವಿದ್ಯಾನಗರದ ಅಧ್ಯಕ್ಷ ಸಿ.ಕೆ. ಸಿದ್ದಪ್ಪ, ರೋಟರಿ ದಾವಣಗೆರೆ ಮಿಡ್‌ಟೌನ್ ಅಧ್ಯಕ್ಷ ಡಾ. ಎಸ್.ಬಿ.ಮಲ್ಲೂರ್, ವಿದ್ಯಾನಗರ ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಜಯಶ್ರೀ ಸದಾನಂದ, ಸ್ವರ್ಣಭಾರತಿ ಎನ್‌ಜಿಒದ ಭಾರತಿ ಕೇಶವ್, ಹಾಸ್ಟೆಲ್ ನಿಲಯಪಾಲಕಿ ರಶ್ಮೀ ಶೆಟ್ಟಿ, ಡಾ. ವಿ.ಎಲ್. ಜಯಸಿಂಹ, ಕವಿತಾ ಶ್ರೀಧರ್,ಮಂಜುಳಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net