ಅರಣ್ಯ ರಕ್ಷಕರ ಸ್ಮರಣೆ ನಮ್ಮ ಕರ್ತವ್ಯ

CTD Forest ---
Published on

ಚಿತ್ರದುರ್ಗ: ದೇಶದ ಗಡಿಯಲ್ಲಿರುವ ನಮ್ಮ ಸೈನಿಕರು ಎಷ್ಟು ಮುಖ್ಯವೋ, ರಾಷ್ಟ್ರೀಯ ಸಂಪತ್ತುಗಳಾದ ಕಾಡು, ವನ್ಯಜೀವಿ, ಜೀವ ಸಂಕುಲ ರಕ್ಷಿಸುವ ಹಸಿರು ಯೋಧರು ಕೂಡ ಅಷ್ಟೇ ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್‌ವಾಸುದೇವ್ ಹೇಳಿದರು.

ನಗರದ ಡಿಸಿಎಫ್ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಅರಣ್ಯ ಇಲಾಖೆಗೆ ಸರ್ಕಾರ ಸಿಬ್ಬಂದಿ, ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ನಮ್ಮ ಸಂವಿಧಾನ ಪರಿಸರ, ವನ್ಯಜೀವಿ, ಜೀವವೈವಿಧ್ಯಗಳ ರಕ್ಷಣೆ ಮಹತ್ವ ತಿಳಿಸಿದೆ. ಪರಿಸರ ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ರಾಜ್ಯ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಮಾಲತೇಶ್ ಅರಸ್ ಮಾತನಾಡಿ, ಅರಣ್ಯಸಂರಕ್ಷಣೆ ಮಹತ್ವವನ್ನು ಜನರಿಗೆ ತಿಳಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಗೋಪ್ಯಾನಾಯ್ಕ ಮಾತನಾಡಿ, ಅರಣ್ಯಇಲಾಖೆ ಸಿಬ್ಬಂದಿ, ಅರಣ್ಯ ಮತ್ತು ವ ನ್ಯಜೀವಿಗಳ ಸಂರಕ್ಷಣೆಗೆ ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ ಎಂದರು.

1966ರಿಂದ 2025ರವರೆಗೆ ಚಿತ್ರದುರ್ಗ ಜಿಲ್ಲೆಯ ಇಬ್ಬರು ಸೇರಿ ರಾಜ್ಯದಲ್ಲಿ 62 ಮಂದಿ ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗಿದ್ದಾರೆ ಎಂದು ಸ್ಮರಿಸಿದರು.

ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಹರೀಶ್, ಎಸಿಎಫ್‌ಗಳಾದ ಸುರೇಶ್, ಎಂ.ಎಸ್. ನ್ಯಾಮತಿ, ಅಧೀಕ್ಷಕ ರಾಜಪ್ಪ, ಆರ್‌ಎಫ್‌ಒಗಳಾದ ವಸಂತಕುಮಾರ್, ಉಷಾರಾಣಿ, ಹರ್ಷ, ಸುನೀಲ್, ಮ್ಯಾನೇಜರ್‌ಹಾಲೇಶ್, ಡಿಆರ್‌ಎಫ್‌ಗಳಾದ ಬಹುಗುಣ, ದಯಾನಂದ, ರಾಮದಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net