

ಚಾಮರಾಜನಗರ : ಮದುವೆಯಾಗುತ್ತೇನೆ ಎಂದು ನಂಬಿಸಿ ಅರಣ್ಯ ರಕ್ಷಕನೊಬ್ಬ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಯಳಂದೂರಿನ ಗುಂಬಳ್ಳಿ ಾರೆಸ್ಟ್ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಾರೆಸ್ಟ್ ಗಾರ್ಡ್ ಮುತ್ತಪ್ಪ ಗುಜನಟ್ಟಿ (32) ವಿರುದ್ಧ ಕೊಳ್ಳೇಗಾಲ ತಾಲೂಕಿನ ಗ್ರಾಮವೊಂದರ ಯುವತಿ ಏ.2ರಂದು ದೂರು ನೀಡಿದ್ದಾಳೆ. ದೂರಿನಲ್ಲಿ ಏನಿದೆ?: ಯಳಂದೂರು ತಾಲೂಕಿನ ಶಾಲೆಯೊಂದರಲ್ಲಿ 30 ವರ್ಷದ ಯುವತಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಶಾಲೆಗೆ ಹೋಗಿ ಬರುವ ಸಂದರ್ಭದಲ್ಲಿ ಮುತ್ತಪ್ಪ ಗುಜನಟ್ಟಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ. ಈ ಸಂದರ್ಭದಲ್ಲಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ದಿನ ಕಳೆದಂತೆ ಆಕೆಯನ್ನು ಮದುವೆಯಾಗುವುದಿಲ್ಲ ಎಂದು ಹೇಳಿ, ಜಾತಿನಿಂದನೆಯನ್ನು ಮಾಡಿದ್ದಾನೆ.
ಈ ಸಂಬಂಧ ಮಾ.14 ರಂದು ಯುವತಿ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಈ ವೇಳೆ ಪೊಲೀಸರೊಂದಿಗೆ ಆಕೆಯನ್ನು ಮದುವೆಯಾಗುತ್ತೇನೆ ಎಂದು ಹೇಳಿಕೆ ನೀಡಿ, ನಗರದ ಶ್ರೀವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಯುವತಿಗೆ ತಾಳಿ ಕಟ್ಟಿದ್ದನು. ಯುವತಿಯ ಮನೆಗೂ ಹೋಗಿ ಕುಟುಂಬದವರ ಮುಂದೆಯೂ ಯುವತಿಯನ್ನು ನೋಂದಣಿ ಮ್ಯಾರೇಜ್ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಮನೆಗೆ ಬಿಟ್ಟುಹೋಗಿದ್ದನು. ನಂತರ ಯುವತಿ ಆತನಿಗೆ ಕರೆ ಮಾಡಿದಾಗ ನೀನು ಪರಿಶಿಷ್ಟ ಜಾತಿಯವಳಾಗಿದ್ದು, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಜಾತಿನಿಂದನೆ ಮಾಡಿದ್ದಾನೆ. ನಾನು ಇಲಾಖೆಯಲ್ಲಿದ್ದು, ನನ್ನನ್ನು ಏನೂ ಮಾಡಲು ಆಗುವುದಿಲ್ಲ. ನಿನ್ನ ಜತೆ ಬಾಳಬೇಕು ಎಂದರೆ 40 ಲಕ್ಷ ರೂ. ವರದಕ್ಷಿಣೆ ಕೊಡಬೇಕು, ಇಲ್ಲವಾದರೆ ಬಿಟ್ಟುಬಿಡುತ್ತೇನೆ ಎಂದು ಬೆದರಿಸಿದ್ದಾನೆ. ಒಂದು ವೇಳೆ ನನ್ನನ್ನು ಮದುವೆ ಮಾಡಿಕೊಳ್ಳಲು ಬಂದರೆ ನನಗೆ ಏನು ಮಾಡಬೇಕು ಎಂದು ಗೊತ್ತಿದೆ ಎಂದು ಬೆದರಿಸುತ್ತಿದ್ದು, ಬೇರೆ ಯುವತಿಯನ್ನು ಮದುವೆಯಾಗಲು ನಾಪತ್ತೆಯಾಗಿದ್ದಾನೆ. ಈತನ ವಿರುದ್ಧ ದೂರು ದಾಖಲಿಸಿಕೊಂಡು ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ದೂರು ನೀಡಿದ್ದಾಳೆ.
ಪ್ರಕರಣ ಸಂಬಂಧ ಯುವತಿ ಕಡೆಯಿಂದ ಗಮನಕ್ಕೂ ಬಂದಿದೆ. ಾರೆಸ್ಟ್ ಗಾರ್ಡ್ ಮುತ್ತಪ್ಪ ಗುಜನಟ್ಟಿ ರಜೆ ಅರ್ಜಿಯನ್ನು ಬರೆದು, ಅನುಮತಿ ಪಡೆಯದೆ ಹೋಗಿದ್ದಾರೆ. ಈ ಕುರಿತು ಯಳಂದೂರು ಅರಣ್ಯ ಇಲಾಖೆಯಿಂದ ವರದಿ ತರಿಸಿಕೊಳ್ಳಲಾಗುವುದು.
ಶ್ರೀಪತಿ ಬಿಆರ್‌ಟಿ ಹುಲಿ ಯೋಜನೆ ಸಂರಕ್ಷಣಾಧಿಕಾರಿ, ಚಾಮರಾಜನಗರ