ಅರಣ್ಯ ಬೆಳೆಸಿ ಮಲೆನಾಡಿನ ವೈಭವ ಮರಳಿಸಿ

29 skp 4
ಶಿಕಾರಿಪುರ ತಾಲೂಕಿನ ಹರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಿಸಲಾಯಿತು. ಅಶೋಕ್, ಶಿವಮೂರ್ತಿ, ಕೇಶವಮೂರ್ತಿ, ಪ್ರವೀಣ್, ಎಸ್.ಕೆ.ನಾರಾಯಣ ಇತರರಿದ್ದರು.
Published on

ಶಿಕಾರಿಪುರ: ನಾವು ಅರಣ್ಯ ಬೆಳೆಸುವ ಮೂಲಕ ಮಲೆನಾಡಿನ ವೈಭವವನ್ನು ಮರುಕಳಿಸುವಂತೆ ಮಾಡಬೇಕು ಎಂದು ಅರಣ್ಯಾಕಾರಿ ಅಶೋಕ್ ಹೇಳಿದರು.

ಶ್ರೀ ನಾರಾಯಣಗುರು ವಿಚಾರ ವೇದಿಕೆ ತಾಲೂಕು ಘಟಕದಿಂದ ಹರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಗಿಡಗಳನ್ನು ನೆಟ್ಟು ಪೋಷಿಸಬೇಕು. ಕಾಡಿದ್ದರೆ ನಾಡು, ಕಾಡಿದ್ದರೆ ಮಳೆ, ಮಳೆ ಬಂದರೆ ಬೆಳೆ ಮತ್ತು ಬಾಳು ಸಮೃದ್ಧ. ನಾವು ಮಕ್ಕಳಲ್ಲಿ ವನಮಹೋತ್ಸವಗಳ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು. ಕಾಡು ಪ್ರಾಣಿಗಳು, ಸಸ್ಯವರ್ಗ, ಪಕ್ಷಿಗಳನ್ನು ಉಳಿಸುವ ನಿಟ್ಟಿನಲ್ಲಿ ನೀವು, ನಾವೆಲ್ಲರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಜತೆಗೆ ಕೈಜೋಡಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ಶಿವಮೂರ್ತಿ ಮಾತನಾಡಿ, ನಾರಾಯಣಗುರುಗಳು ಶಿಕ್ಷಣಕ್ಕೆ ಮತ್ತು ಸಂಘಟನೆಗೆ ಹೆಚ್ಚು ಒತ್ತುಕೊಟ್ಟರು. ಕೇರಳ ರಾಜ್ಯದ ಅಂದಿನ ಜಾತಿಪದ್ಧತಿ, ಮೂಢನಂಬಿಕೆ, ವೌಢ್ಯಗಳನ್ನು ತೊಡೆದುಹಾಕಿದ ಮಹಾಪುರುಷರು ಎಂದರು.

ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ತಾಲೂಕು ನಾರಾಯಣಗುರು ವಿಚಾರ ವೇದಿಕೆಯ ಕೇಶವಮೂರ್ತಿ, ಜಿಲ್ಲಾಧ್ಯಕ್ಷ ಪ್ರವೀಣ್, ಮುಖ್ಯ ಶಿಕ್ಷಕ ಧನಂಜಯ್, ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್, ಪದಾಕಾರಿಗಳಾದ ಹೂವಣ್ಣ , ಸಂತೋಷ್, ಎಸ್.ಕೆ.ನಾರಾಯಣ, ಸೋಮಶೇಖರ, ಪುಟ್ಟಪ್ಪ, ಬಂಡೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net