ಗುಂಡ್ಲುಪೇಟೆ: ಬಂಡೀಪುರ ಹಾಗೂ ನೆರೆ ರಾಜ್ಯಗಳ ಅರಣ್ಯ ಪ್ರದೇಶಗಳಲ್ಲಿ ರಣಹದ್ದುಗಳ ಸಮೀಕ್ಷೆ ನಡೆಸಲು ಸಿಂಕ್ರೋನೈಸ್ಡ್ ವಲ್ಚರ್ ಸಂಸ್ಥೆ ಮುಂದಾಗಿದೆ. ಬಂಡೀಪುರದ ಸ್ವಾಗತ ಕೇಂದ್ರದಲ್ಲಿ ಶುಕ್ರವಾರ ಸಂಸ್ಥೆ ಸಭೆ ನಡೆಸಿತು.
ಶನಿವಾರ ಹಾಗೂ ಭಾನುವಾರ ಬಂಡೀಪುರ, ನೆರೆಯ ತಮಿಳುನಾಡಿನ ಮುದುಮಲೈ ಹಾಗೂ ಕೇರಳದ ವಯನಾಡ್ ಅರಣ್ಯ ಪ್ರದೇಶದಲ್ಲಿ ಏಕಕಾಲದಲ್ಲಿ ಸಮೀಕ್ಷೆ ನಡೆಸಲಿದೆ. ಇದಕ್ಕಾಗಿ ಬಂಡೀಪುರದಲ್ಲಿ ನಲವತ್ತು ಸ್ಥಳಗಳನ್ನು ಗುರುತಿಸಲಾಗಿದೆ. ಇಲಾಖೆಯ 70 ಸಿಬ್ಬಂದಿ ಹಾಗೂ 40 ಸ್ವಯಂ ಸೇವಕರು ಇದರಲ್ಲಿ ಭಾಗವಹಿಸುವರು ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.