ಅರಣ್ಯ ಪರಿಸರ, ವನ್ಯಜೀವಿ ರಕ್ಷಣೆಗೆ ಕರ್ನಾಟಕ ಸಂಭ್ರಮ-೫೦ ಸಹಕಾರಿ

24 ckm 5
ಚಿಕ್ಕಮಗಳೂರಿನ ಬೈಪಾಸ್ ರಸ್ತೆಂiÀiಲ್ಲಿ ಸೈಮನ್ ಎಕ್ಸಿಬಿರ‍್ಸ್ ಸಂಸ್ಥೆ ಪ್ರಾರಂಭಿಸಿರುವ ಕರ್ನಾಟಕ ಸಂಭ್ರಮ-೫೦ ವಸ್ತುಪ್ರದರ್ಶನವನ್ನು ನಗರಸಭೆ ಅಧ್ಯಕ್ಷ ಸುಜಾತಾ ಶಿವಕುಮಾರ್ ಉದ್ಘಾಟಿಸಿದರು. ಅನು ಮಧುಕರ್, ಬಸವರಾಜ್, ಎ.ಭದ್ರಪ್ಪ, ವೀರೇಶಾಚಾರ್, ಎಂ.ಎಸ್.ನಾಗಚAದ್ರ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಪರಿಸರ ಮತ್ತು ಅರಣ್ಯ, ವನ್ಯಜೀವಿಗಳನ್ನು ರಕ್ಷಿಸಲು ಕರ್ನಾಟಕ ಸಂಭ್ರಮ-೫೦ ಈ ವಸ್ತು ಪ್ರದರ್ಶನ ಸಹಕಾರಿಯಾಗಿದೆ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಭಿಪ್ರಾಯಪಟ್ಟರು.

ನಗರದ ಬೈಪಾಸ್ ರಸ್ತೆಂiÀiಲ್ಲಿ ಸೈಮನ್ ಎಕ್ಸಿಬಿರ‍್ಸ್ ಸಂಸ್ಥೆ ಪ್ರಾರಂಭಿಸಿರುವ ಕರ್ನಾಟಕ ಸಂಭ್ರಮ-೫೦ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಕಾಡುಪ್ರಾಣಿಗಳ ಲೋಕ ವಿಸ್ಮಯ ತರಿಸುತ್ತದೆ. ಈ ಮೂಲಕ ಪ್ರಕೃತಿ, ಅರಣ್ಯ ಪರಿಸರ ಉಳಿಸಲು ಪೂರಕ ವಾತಾವರಣವನ್ನು ವಸ್ತುಪ್ರದರ್ಶನ ನಿರ್ಮಾಣ ಮಾಡಿದೆ ಎಂದು ಶ್ಲಾಘಿಸಿದರು.

ನಶಿಸುತ್ತಿರುವ ವನ್ಯ ಪ್ರಾಣಿ-ಪಕ್ಷಿಗಳ ಲೋಕ ವಿಶೇಷ ಆಕರ್ಷಣೆಯಾಗಿದ್ದು, ಆಹಾರ ಮಳಿಗೆ, ವಿವಿಧ ಕರಕುಶಲ ವಸ್ತುಗಳ ಮಾರಾಟ ಮಳಿಗೆ ಇನ್ನೂ ಮುಂತಾದ ಬಹುಪಯೋಗಿ ವಸ್ತು ಪ್ರದರ್ಶನದಲ್ಲಿ ಇಡಲಾಗಿದ್ದು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ವೀಕ್ಷಿಸಿದರೆ ತುಂಬಾ ಅನುಭವ ಸಿಗುತ್ತದೆ ಎಂದು ಹೇಳಿದರು.

ವಸ್ತುಪ್ರದರ್ಶನವನ್ನು ವೀಕ್ಷಿಸಿದ ತಮಗೆ ಇಂಗ್ಲಿಷ್ ಸಿನಿಮಾದ ಸಾಹಸಮಯ ಚಿತ್ರಗಳನ್ನು ನೋಡಲು ಹಾಗೂ ಅಭೂತಪೂರ್ವ ಕಲಾಕೃತಿಗಳು ಜನರ ಮನಸ್ಸಿನಲ್ಲಿ ಒಂದು ಮನರಂಜನೆಯನ್ನು ತಂದುಕೊಡುತ್ತದೆ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್ ಮಾತನಾಡಿ, ಬೆಂಗಳೂರು ಮತ್ತು ಮೈಸೂರಿಗೆ ಸೀಮಿತವಾಗಿದ್ದ ಬೃಹತ್ ಎಕ್ಸಿಬಿಷನ್ ಇಂದು ಚಿಕ್ಕಮಗಳೂರಿನಲ್ಲಿ ಆರಂಭವಾಗಿರುವುದು ತುಂಬಾ ಸಂತಸ ತಂದಿದೆ ಎಂದು ಹೇಳಿದರು.

ವಸ್ತುಪ್ರದರ್ಶನದ ಒಳಗೆ ಪ್ರವೇಶಿಸಿದರೆ ದಸರಾ ಮಹೋತ್ಸವವನ್ನು ನೋಡುತ್ತಿz್ದೆÃವೆ ಎಂಬ ಅಭಿಪ್ರಾಯ ಮೂಡುತ್ತದೆ. ಹಾರರ್ ಮೂವಿ ಮಾದರಿಯ ಜೊತೆಗೆ ಪ್ರಾಣಿ-ಪಕ್ಷಿಗಳ ವೀಕ್ಷಿಸಲು ಈ ವಸ್ತುಪ್ರದರ್ಶನ ಆಯೋಜಕರು ಒಳ್ಳೆಯ ಸದಾವಕಾಶವನ್ನು ಒದಗಿಸಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸೈಮನ್ ಎಕ್ಸಿಬಿರ‍್ಸ್ ನಿರ್ದೇಶಕ ಎಂ.ಎಸ್. ನಾಗಚಂದ್ರ ಮಾತನಾಡಿ, ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ಸಂಭ್ರಮ-೫೦ ಮೇಳವನ್ನು ಆಯೋಜಿಸಲಾಗಿದ್ದು, ಇಂದಿನಿAದ ನ.೨೪ ರವರೆಗೆ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ ೫ ರಿಂದ ರಾತ್ರಿ ೯ ಗಂಟೆಯವರೆಗೆ ಎಕ್ಸ್ಪೋ ತೆರೆದಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಬಸವರಾಜ್, ಸೈಮನ್ ಎಕ್ಸಿಬಿರ‍್ಸ್ನ ಮುಖ್ಯಸ್ಥರಾದ ಎ.ಭದ್ರಪ್ಪ, ವೀರೇಶಾಚಾರ್, ವೆಂಕಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net