ಅರಣ್ಯ, ನೀರು ಸಂರಕ್ಷಣೆ ಕೈಗೊಳ್ಳಿ

23Athni2
Published on

ಅಥಣಿ: ಇಂದು ಪರಿಸರ, ಜೀವವೈವಿಧ್ಯದಲ್ಲಿ ಅವಲಂಬನೆ ಹಾಗೂ ಹೊಂದಾಣಿಕೆ ಬಹಳ ಅಗತ್ಯವಾಗಿದೆ ಎಂದು ಪರಿಸರ ತಜ್ಞ ರಾಮಪ್ಪ ಹುಬ್ಬಳ್ಳಿ ಹೇಳಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಜಲಸಂಪತ್ತು ವಿನಾಶದ ಅಂಚಿನಲ್ಲಿದ್ದು, ಸುಸ್ಥಿರವಾಗಿ ಬಳಸದಿದ್ದ್ದರೆ ಮುಂದಿನ ಪೀಳಿಗೆ ಸಂಕಷ್ಟ ಎದುರಿಸಬೇಕಾಗುತ್ತದೆ. ಅರಣ್ಯ ರಕ್ಷಣೆ, ನೀರು ಸಂರಕ್ಷಿಸಬೇಕೆಂದು ಕರೆ ನೀಡಿದರು.

ಮಹಾವಿದ್ಯಾಲಯದ ಸಸ್ಯಶಾಸ್ತ್ರ ಉಪನ್ಯಾಸಕ ಧೀರೇಂದ್ರ ಭಟ್ ಮಾತನಾಡಿ, ನೀರಿನ ಮಹತ್ವ, ಬಳಕೆ, ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪ್ರಾಂಶುಪಾಲ ಡಾ.ಬಿ.ಎಸ್.ಕಾಂಬಳೆ ಮಾತನಾಡಿ, ಪ್ರತಿಯೊಬ್ಬರೂ ಮಳೆ ನೀರಿನ ಸಂಗ್ರಹಣೆ ಹಾಗೂ ಅದರ ಸಮರ್ಪಕ ಬಳಕೆ, ನೀರಿನ ಶುದ್ಧೀಕರಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಎನ್‌ಎಸ್‌ಎಸ್ ಸ್ವಯಂ ಸೇವಕರ ತಂಡ ಕಿರುನಾಟಕದ ಮೂಲಕ ಜಾಗೃತಿ ಮೂಡಿಸಿದರು.

ಸಂಯೋಜಕ ಡಾ.ಪ್ರಶಾಂತ ಮಗದುಮ್ಮ, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಮಂಜುನಾಥ ಎನ್.ವಿ., ಎನ್‌ಎಸ್‌ಎಸ್ ನಾಯಕಿ ಅಕ್ಷತಾ ತಳವಾರ, ರಾಕೇಶ ಚಿಮ್ಮಡ, ಮಹಾದೇವಿ ಜಕ್ಕಪ್ಪನವರ ಮತ್ತು ಅಕ್ಷತಾ ಬೆಳ್ಳಂಕಿ, ರೋಹಿಣಿ ಜಾಧವ, ರಕ್ಷಿತಾ ತಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net