ಅರಣ್ಯ ನಾಶದಿಂದ ನಾಡಿನತ್ತ ಪ್ರಾಣಿಗಳು

06 ard 02
Published on

ಔರಾದ್: ಕಾಡು ಕ್ಷೀಣಿಸುತ್ತಿರುವುದರಿಂದ ವನಸ್ಪತಿ, ಬೆಲೆ ಬಾಳುವ ಮರಗಳು ದೊರೆಯುತ್ತಿಲ್ಲ, ಕಾಡು ಪ್ರಾಣಿ, ಪಕ್ಷಿಗಳು ಮಾಯವಾಗಿವೆ. ಅರಣ್ಯ ನಾಶದಿಂದ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಕಸಾಪ ತಾಲೂಕು ಅಧ್ಯಕ್ಷ ಡಾ.ಶಾಲಿವಾನ ಉದಗಿರೆ ಹೇಳಿದರು.
ಗಣೇಶಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ `ಕಾಡು ಬೆಳೆಸಿ ನಾಡು ಉಳಿಸಿ' ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯ ನಾಶದಿಂದ ಹವಾಮಾನದಲ್ಲಿ ಏರು ಪೇರಾಗುತ್ತಿದೆ. ಕಾಡು ಬೆಳೆಸೋಣ, ನಾಡು ಉಳಿಸೋಣ. ಮಗುವಿಗೊಂದು ಮರ, ಶಾಲೆಗೊಂದು ಕೈತೋಟ ಮಾಡಿ, ಅರಣ್ಯ ಬೆಳೆಸೋಣ ಎಂದರು.
ಶೈಕ್ಷಣಿಕ ಹಾಗೂ ಭೌತಿಕವಾಗಿ ಅತ್ಯುತ್ತಮ ಶಾಲೆ ನಿರ್ಮಿಸಿರುವ ಶಿಕ್ಷಕ ಸಂಜು ಬಿರಾದಾರ ಹಾಗೂ ನೂತನ ಪಿಎಸ್‌ಐ ಉಪೇಂದ್ರಕುಮಾರ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಬಸವರಾಜ ಪಾಟೀಲ್ ಬಸನಾಳ, ಸಂಜಯ ಮೇತ್ರೆ, ನಾರಾಯಣ ರಾಠೋಡ್, ನೈಮೋದ್ದೀನ್, ಪ್ರಕಾಶ ಬರದಾಪುರೆ, ಮುಖ್ಯ ಶಿಕ್ಷಕರಾದ ಶಿವಾಜಿರಾವ, ಪ್ರವೀಣಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net