ಅರಣ್ಯ ಕಣ್ಗಾವಲಿಗೆ ಸಿಸಿ ಕ್ಯಾಮರಾ ಕೊಡುಗೆ

27ss1cc camara vitarane
Published on

ಶನಿವಾರಸಂತೆ: ಬಾಣವಾರ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಸಂಚಾರ, ಅರಣ್ಯ ರಕ್ಷಣೆ, ಬೆಂಕಿ ಅನಾಹುತದಿಂದ ರಕ್ಷಣೆ, ಅರಣ್ಯದೊಳಗೆ ತ್ಯಾಜ್ಯ ಎಸೆಯುವವರ ಮಾಹಿತಿ ಸೇರಿದಂತೆ ಅರಣ್ಯ ಕಣ್ಗಾವಲಿಗಾಗಿ ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಸದಸ್ಯ ಮತ್ತು ಕೃಷಿಕ ಎ.ಎಸ್.ರಾಮಣ್ಣ ಅವರು ಅರಣ್ಯ ಇಲಾಖೆಗೆ ಎಂಆರ್‌ಎಚ್‌ಎಫ್ ಸಿ.ಸಿ. ಕ್ಯಾಮರಾವನ್ನು ಕೊಡುಗೆಯಾಗಿ ನೀಡಿದರು.

ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಸಹಯೋಗದಲ್ಲಿ ಬಾಣವಾರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಿಸಿ ಕ್ಯಾಮರಾವನ್ನು ಹಸ್ತಾಂತರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ದಯಾನಂದ್, ಕಾರ್ಯದರ್ಶಿ ಕಿರಣ್, ವಲಯ ಸೇನಾನಿ ಉದಯಕುಮಾರ್, ರೋಟರಿ ಸದಸ್ಯ ಶಿವಪ್ರಕಾಶ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net