ಅರಣ್ಯ ಉಳಿಸುವ ಕೆಲಸವಾಗಲಿ

18ark2
Published on

ಅರಕಲಗೂಡು: ನದಿಗಳ ಮೂಲ ಕಾಡು. ಅವುಗಳಿಲ್ಲದಿದ್ದರೆ ಕುಡಿಯುವ ನೀರಿಗೂ ಪರಿತಪಿಸಬೇಕಾಗುತ್ತದೆ. ಹಾಗಾಗಿ ಅರಣ್ಯವನ್ನು ಉಳಿಸುವ ಕೆಲಸವಾಗಬೇಕು ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸುಂರಕ್ಷಣಾಧಿಕಾರಿ ಡಾ.ಪ್ರಭುಗೌಡ ಈ.ಬಿರಾದರ ಮನವಿ ಮಾಡಿದರು.

ಪಟ್ಟಣ ಹೊರವಲಯದ ಹೊನ್ನವಳ್ಳಿಯ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಬುಧವಾರ ಆಯೋಜಿಸಿದ್ದ ಪರಿಸರ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ನದಿಗಳು ಹುಟ್ಟಿರುವುದು ಕಾಡಿನಲ್ಲಿ. ಹೀಗಾಗಿ ಅವುಗಳನ್ನು ಉಳಿಸಬೇಕು. ಸ್ವಚ್ಛ ಗಾಳಿ, ನೀರು, ವಾತಾವರಣವನ್ನು ಮುಂದಿನ ಪೀಳಿಗೆಗೂ ನೀಡಬೇಕಾದರೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದರು.

ಕೆಸವತ್ತೂರು ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಇದಕ್ಕೂ ಮುನ್ನ ಶಾಸಕ ಎ. ಮಂಜು ಅವರು ಗಿಡ ನೆಟ್ಟು ನೀರೆರೆಯುವ ಮೂಲಕ ಪರಿಸರ ದಸರಾಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ಕುರಿತು ಬೀದಿನಾಟಕ ಗಮನ ಸೆಳೆಯಿತು. ಕಲಾವಿದ ದೇವಾನಂದ ವರಪ್ರಸಾದ್ ಪರಿಸರ ಗೀತೆಗಾಯನ ನಡೆಸಿಕೊಟ್ಟರು.

ಗ್ರಾಪಂ ಅಧ್ಯಕ್ಷ ಸ್ವಾಮಿಗೌಡ, ಉಪಾಧ್ಯಕ್ಷೆ ಅಂಜುಶ್ರೀ, ಪರಿಸರವಾದಿ ಜಯರಾಜು, ಸಾಮಾಜಿಕ ಅರಣ್ಯ ವಲಯ ಅರಣ್ಯಧಿಕಾರಿ ಹೇಮಂತ್‌ಕುಮಾರ್, ಪ್ರಾದೇಶಿಕ ಅರಣ್ಯ ವಲಯ ಅರಣ್ಯಾಧಿಕಾರಿ ಯಶ್ಮ ಮಾಚಮ್ಮ, ಬೆಳವಾಡಿ ಶಾಖೆ ಉಪ ವಲಯ ಅರಣ್ಯಧಿಕಾರಿ ಲಕ್ಷ್ಮೀನಾರಾಯಣ, ಉಪ ವಲಯ ಅರಣ್ಯಾಧಿಕಾರಿ ಶಂಕರ್, ಗುರುಸ್ವಾಮಿ, ಕಿಶೋರ್, ಪರಮೇಶ, ತೋಟಗಾರಿಕೆ ಇಲಾಖೆ ನಿರ್ದೇಶಕ ರಾಜೇಶ್, ಮುಖಂಡರಾದ ರಘು, ನಂದಕುಮಾರ್, ಪಪಂ ಸದಸ್ಯ ಹೂವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net