

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ನಾಲತವಾಡ ಅರಣ್ಯ ವಿಭಾಗದಿಂದ ಇಂದಿನಿಂದ ಸಸಿಗಳ ವಿತರಣೆ ಆರಂಭವಾಗಿದೆ. ಸಸಿಗಳನ್ನು ಪಡೆಯಲು ರೈತರು ನೂರಾರು ಸಂಖ್ಯೆಯಲ್ಲಿ ನರ್ಸರಿಗೆ ಆಗಿಮಿಸಿದ್ದು, ಕೋವಿಡ್ ನಿಯಮದಂತೆ ಸರತಿ ಸಾಲಿನಲ್ಲಿ ನಿಂತು ಸಸಿಗಳನ್ನು ಪಡೆದರು. ಜಮೀನಿನ ಪಹಣಿ ಪತ್ರದ ಆಧಾರದ ಮೇಲೆ ಎಲ್ಲರಿಗೂ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಲಾಯಿತು. ಆರ್ ಎಫ್ ಓ ವೈ ಆರ್ ರಾಠೋಡ, ಡಿ ಆರ್ ಎಫ್ ಓ ಮೃತ್ಯುಂಜಯ ಬಿದರಿಕುಂದಿ ನೇತೃತ್ವದಲ್ಲಿ 30 ಸಾವಿರ ಸಸಿಗಳನ್ನು ರೈತರಿಗೆ ವಿತರಿಸಲಾಯಿತು. ಮಾವು, ಪೇರಲ, ಮಹಾಗಣಿ, ರಕ್ತಚಂದನ, ಕರಿಬೇವು, ನಿಂಬೆ ಸೇರಿದಂತೆ ಇತರೆ ಸಸಿಗಳನ್ನು ಬೆಳೆಸಲಾಗಿದ್ದು, ರೈತರಿಗೆ ನೀಡಲಾಯಿತು. ಸಸಿಗಳನ್ನು ಪಡೆಯಲು ವಿಜಯಪುರ, ರಾಯಚೂರು, ಯಾದಗಿರಿ, ಕೊಪ್ಪಳ, ಬಾಗಲಕೋಟೆ, ಜಿಲ್ಲೆಯಿಂದ ಆಸಕ್ತ ರೈತರು ಆಗಮಿಸಿದ್ರು.