ಅರಣ್ಯ ಇಲಾಖೆ ಚಾಲಕನ ಮೇಲೆ ಆನೆ ದಾಳಿ

15-GPT-3-GURUSWAMY
Published on

ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಜೀಪಿನಿಂದ ಕೆಳಗಿಳಿದ ಚಾಲಕನ ಮೇಲೆ ಕಾಡಾನೆಯೊಂದು ದಾಳಿ ನಡೆಸಲು ಮುಂದಾಗಿದೆ. ಕುಂದಕೆರೆ ವಲಯದ ಜೀಪ್ ಚಾಲಕ ಗುರುಸ್ವಾಮಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ಗಾಯಗೊಂಡಿದ್ದಾರೆ.

ಗುರುವಾರ ಕರ್ತವ್ಯದಲ್ಲಿದ್ದ ಗುರುಸ್ವಾಮಿ ಜೀಪಿನಿಂದ ಕೆಳಗಿಳಿದಾಗ ಮರೆಯಲ್ಲಿ ಅಡಗಿದ್ದ ಆನೆಯೊಂದು ಏಕಾಏಕಿ ದಾಳಿಗೆ ಮುಂದಾಗಿದೆ. ಆನೆಯಿಂದ ತಪ್ಪಿಸಿಕೊಳ್ಳಲು ಓಡುವಾಗ ಕೆಳಗೆ ಬಿದ್ದು ಗಾಯಗೊಂಡರು. ಕೂಡಲೇ ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಕುಂದಕೆರೆ ವಲಯದ ಆರ್‌ಎಫ್‌ಒ ಬಿ.ಎಂ.ಮಲ್ಲೆಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net